Home » Crime news : ಶಾಲೆಗೆ ಹೋಗುತ್ತಿದ್ದ ಬಾಲಕಿಯ ಅತ್ಯಾಚಾರಗೈದು ಕೊಲೆ! ಕ್ಯಾಬ್‌ ಡ್ರೈವರ್‌ನಿಂದ ಭೀಕರ ಕೃತ್ಯ!

Crime news : ಶಾಲೆಗೆ ಹೋಗುತ್ತಿದ್ದ ಬಾಲಕಿಯ ಅತ್ಯಾಚಾರಗೈದು ಕೊಲೆ! ಕ್ಯಾಬ್‌ ಡ್ರೈವರ್‌ನಿಂದ ಭೀಕರ ಕೃತ್ಯ!

1 comment
Crime news

sikkim : ಕೆಲವೊಮ್ಮೆ ಕ್ರೂರ ಮೃಘ ಮತ್ತು ಮನುಷ್ಯನಿಗೆ ವ್ಯತ್ಯಾಸ ಇರುವುದಿಲ್ಲ ಅನ್ನುವಷ್ಟರ ಮಟ್ಟಿಗೆ ವರ್ತಿಸುತ್ತಾರೆ . ಇತ್ತೀಚೆಗೆ ಮನುಷ್ಯನ ಕಾಮ ದಾಹ ಹೆಚ್ಚುತ್ತಿದ್ದು ಅಮಾಯಕ ಜೀವಗಳು ಅಲ್ಲಲ್ಲಿ ಬಲಿಯಾಗುವುದು ನೋಡಿದಾಗ ಕರುಳು ಚುರುಕು ಎನ್ನುತ್ತೆ. ಅಂತೆಯೇ, ಶಾಲೆಯಿಂದ ಮನೆಗೆ ವಾಪಾಸ್ ಆಗುತ್ತಿದ್ದ ಶಾಲಾ ಬಾಲಕಿಯೊಬ್ಬಳ ಮೇಲೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರ ಎಸಗಿ ಕೊಲೆ (Crime) ಮಾಡಿರುವ ಭಯಾನಕ ಘಟನೆ ಸಿಕ್ಕಿಂನಲ್ಲಿ ( sikkim) ನಡೆದಿದೆ.

ಏಪ್ರಿಲ್ 14 ರಂದು ಸಿಕ್ಕಿಂ ರಾಜ್ಯದ ರಾಜಧಾನಿ ಗ್ಯಾಂಗ್‌ಟಾಕ್‌ನಲ್ಲಿ ಈ ಘಟನೆ ನಡೆದಿದ್ದು, ಶಾಲೆಗೆ ಹೋಗಿದ್ದ ಬಾಲಕಿ ಕಾಣೆಯಾದ ಮೂರು ದಿನಗಳ ನಂತರ ಆಕೆಯ ಶವ ಪತ್ತೆಯಾಗಿತ್ತು. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಭೇದಿಸಲು ಹೊರಟಾಗ ಬಾಲಕಿ ಮೇಲೆ ಕ್ಯಾಬ್‌ ಡ್ರೈವರ್ ಅತ್ಯಾಚಾರ ಎಸಗಿ ಕೊಲೆ (Rape and murder ) ಮಾಡಿರುವ ವಿಚಾರ ಪೊಲೀಸರಿಗೆ ತಿಳಿದು ಬಂದಿದೆ.

ಏಪ್ರಿಲ್ 14ರಂದು ಎಂದಿನಂತೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ತಡೆದ ಕ್ಯಾಬ್ ಡ್ರೈವರ್ ಮನೆಗೆ ಲಿಫ್ಟ್ ಕೊಡೋದಾಗಿ ಹೇಳಿ ಕಾರ್‌ನಲ್ಲಿ ಕರೆದೊಯ್ದಿದ್ದಾನೆ. ಬಳಿಕ ಆತ ಪೆಟ್ರೋಲ್ ಪಂಪ್‌ನಲ್ಲಿ ಕಾರ್ ನಿಲ್ಲಿಸಿ ಆಕೆಗೆ ತಿಂಡಿ ಮತ್ತು ಜ್ಯೂಸ್ ಕೊಡಿಸಿದ್ದಾನೆ. ಆ ಬಳಿಕ ಆತ ಆಕೆಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ದುರಂತ ಅಂತ್ಯದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕಿಯ ಕೊಲೆಗೆ ಕಾರಣವಾದ 29 ವರ್ಷದ ಕ್ಯಾಬ್ ಡ್ರೈವರ್ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ ಆರೋಪಿಯ ವಿರುದ್ಧ ಸಿಕ್ಕಿಂ ಪೊಲೀಸರು ಪೋಕ್ಸೋ ಕಾಯ್ದೆ ಸೇರಿದಂತೆ ಇತರ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ ಆತನನ್ನು ಗಲ್ಲಿಗೇರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

You may also like

Leave a Comment