Home » Uttara kannada: ಸೇಫ್ಟಿ ಪಿನ್ ನಿಂದ ಭೀಕರವಾಗಿ ಕೈ ಕುಯ್ದುಕೊಂಡ 14 ಹಾಸ್ಟೆಲ್ ವಿದ್ಯಾರ್ಥಿನಿಯರು !!

Uttara kannada: ಸೇಫ್ಟಿ ಪಿನ್ ನಿಂದ ಭೀಕರವಾಗಿ ಕೈ ಕುಯ್ದುಕೊಂಡ 14 ಹಾಸ್ಟೆಲ್ ವಿದ್ಯಾರ್ಥಿನಿಯರು !!

by ಹೊಸಕನ್ನಡ
0 comments

Uttara kannada: ಶಾಲೆಗೆ ಹೋದಂತಹ ಸಂದರ್ಭದಲ್ಲಿ ಸುಮಾರು ಹದಿನಾಲ್ಕು ವಿದ್ಯಾರ್ಥಿನಿಯರು ಬ್ಲೇಡ್ ಹಾಗೂ ಸೇಫ್ಟಿ ಪಿನ್ ಗಳಿಂದ ತಮ್ಮ ಕೈಗಳನ್ನು ಕೊಯ್ದುಕೊಂಡಿರುವಂತಹ ಘಾತಕಾರಿ ಘಟನೆ ಉತ್ತರ ಕನ್ನಡ(Uttara kannada) ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

ಶಾಲೆಗೆ ತೆರಳಿದಂತ ಸಂದರ್ಭದಲ್ಲಿ ಇಂತಹ ಒಂದು ಅಘಾತಕಾರಿ ಘಟನೆ ನಡೆದಿದ್ದು ಶಾಲೆಯಲ್ಲಿದ್ದಂತಹ ಉಳಿದ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಆ ಕೂಡಲೇ ಶಿಕ್ಷೀರು ಪೋಷಕರಿಗೆ ಶಿಕ್ಷಕರು ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಎಲ್ಲರೂ ದಾವಿಸಿದ್ದಾರೆ. ಇದರೊಂದಿಗೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಅಧಿಕಾರಿಗಳು ಕೂಡ ಬಂದು ಈ ಕುರಿತು ವಿಚಾರಣೆಯನ್ನು ಕೈಗೊಂಡಿದ್ದಾರೆ.

ಈ ಘಟನೆಯ ಕುರಿತು ವಿದ್ಯಾರ್ಥಿನಿಯರ ಬಳಿ ಕೇಳಿದರೆ ವಿದ್ಯಾರ್ಥಿನಿಯರು ಸರಿಯಾದ ಉತ್ತರವನ್ನು ನೀಡದೆ ದಾರಿ ತಪ್ಪಿಸುತ್ಯಿದ್ದಾರೆ. ಕೆಲವರು ಹಾರಕೆಯ ಉತ್ತರಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಯಾಕೆ ನಡೆಯಿತು? ಇದರ ಹಿಂದಿನ ಉದ್ದೇಶ ಏನು? ಎಂಬುದು ಇನ್ನೂ ನಿಗೂಢವಾಗಿದ್ದು 14 ವಿದ್ಯಾರ್ಥಿನಿಯರ ನಡೆ ಭಾರೀ ಅಚ್ಚರಿ ಮೂಡಿಸಿದೆ.

You may also like

Leave a Comment