Home » ಆಕೆಗೆ ಇದುವರೆಗೆ ಆದದ್ದು ಬರೋಬ್ಬರಿ 11 ಮದುವೆ,ಆದರೆ 28 ಜನ ಗಂಡಂದಿರು!! ಆಕೆಗೆ ಒಬ್ಬರ ಬಳಿಕ ಒಬ್ಬರು ಸಾಲಿನಲ್ಲಿದ್ದಾರಂತೆ

ಆಕೆಗೆ ಇದುವರೆಗೆ ಆದದ್ದು ಬರೋಬ್ಬರಿ 11 ಮದುವೆ,ಆದರೆ 28 ಜನ ಗಂಡಂದಿರು!! ಆಕೆಗೆ ಒಬ್ಬರ ಬಳಿಕ ಒಬ್ಬರು ಸಾಲಿನಲ್ಲಿದ್ದಾರಂತೆ

0 comments

ಅನೇಕ ಪುರುಷರು ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದರೆ ಇಲ್ಲೊಬ್ಬ ಮಹಿಳೆ ಫುಲ್ ಜಾಲಿ ಯಲ್ಲಿದ್ದಾಳೆ.ಬಹುಪತ್ನಿತ್ವ ಕಾಯಿದೆ ನಿಷೇಧವಿದ್ದರೂ ಕೆಲ ಧರ್ಮಗಳಲ್ಲಿ ಅದಕ್ಕೆ ಕಡಿವಾಣ ಬಿದ್ದಿಲ್ಲ. ಯಾರಿಗೂ ಗೊತ್ತಾಗದಂತೆ ಎರಡು ಅಥವಾ ಮೂರು ಮದುವೆಯಾಗುವುದು ಪ್ರಚಲಿತದಲ್ಲಿರುವ ಸುದ್ದಿ, ಆದರೆ ಈ ಮಹಿಳೆ ಬರೋಬ್ಬರಿ 11 ಮದುವೆಯಾಗಿ ಹಿಸ್ಟ್ರಿ ಕ್ರಿಯೇಟ್ ಮಾಡಿದ್ದಾಳೆ. ಆ ಮಹಿಳೆಯ ಸ್ಟೋರಿ ಕೊಂಚ ಅಚ್ಚರಿಯಾಗಿದೆ ಅನ್ನುವುದರಲ್ಲಿ ಅನುಮಾನವಿಲ್ಲ.

ಹೌದು. ಅಮೇರಿಕಾ ಮೂಲದ ಮೊನೆಟ್ ಎಂಬ 52 ವರ್ಷ ಪ್ರಾಯದ ಈ ಮಹಿಳೆ ಇದುವರೆಗೂ 11 ಮದುವೆಯಾಗಿದ್ದು, ಸದ್ಯ ಇನ್ನೊಂದು ಮದುವೆಗಾಗಿ ಪುರುಷನನ್ನು ಹುಡುಕುತ್ತಿದ್ದಾಳಂತೆ.ಈಕೆಯ ಈ ವರ್ತನೆಗೆ ಅಲ್ಲಿನ ಜನ ವ್ಯಾಸನಿ, ಕಾಮಿ ಎಂಬಂತೆಲ್ಲಾ ಆಕೆಗೆ ಹೇಳುತ್ತಿದ್ದಾರೆ.

ಬಾಲ್ಯದಿಂದಲೇ ತನ್ನ ಸಹೋದರ ಹಾಗೂ ಸ್ನೇಹಿತರನ್ನು ಪ್ರೀತಿಸುತ್ತಿದ್ದ ಆಕೆ 28 ಜನರನ್ನು ಮದುವೆಯಾಗಿದ್ದಾಳಂತೆ.ಪದೇ ಪದೇ ಆಗುತ್ತಿರುವ ಬ್ರೇಕ್ ಅಪ್ ಬಗ್ಗೆ ಕೊಂಚವೂ ಬೇಸರ ವ್ಯಕ್ತಪಡಿಸದ ಆಕೆ, ಬ್ರೇಕ್ ಅಪ್ ಆದ ಬಳಿಕ ಮತ್ತೊಂದು ಮದುವೆಗೆ ಪ್ರಯತ್ನಸುತ್ತಾಳೆ. ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿದ್ದ ಆಕೆ ವಿಚಿತ್ರವಾಗಿ ನುಡಿದಿದ್ದಳು.

ಪ್ರಸ್ತುತ 57 ವರ್ಷದ ಜಾನ್ ಜೊತೆ ಡೇಟಿಂಗ್ ಮಾಡುತ್ತಿರುವ ಆಕೆ ಎರಡು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಮತ್ತೊಂದು ಅಚ್ಚರಿಯ ವಿಚಾರವೆಂದರೆ ಜಾನ್‌ಗೆ ಎರಡು ಬಾರಿ ವಿಚ್ಛೇದನ ನೀಡಿ ಮರು ಮದುವೆಯಾಗಿದ್ದಾಳೆ.

ಮೊನೆಟ್​ ತನ್ನ ಈಗಿನ ಪತಿ ಜಾನ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು,ಇಬ್ಬರೂ ಆನ್‌ಲೈನ್‌ನಲ್ಲಿ ಪರಿಚಯವಾಗಿ ನಂತರ ಪರಸ್ಪರ ತಿಳಿದುಕೊಳ್ಳಲು ಪ್ರಾರಂಭಿಸಿದರು.

ಇನ್ನು ಮಾಜಿ ಗಂಡಂದಿರ ಬಗ್ಗೆ ಮಾತನಾಡಿದ ಮೊನೆಟ್​, ಐದನೇ ಬಾರಿಗೆ ವಿವಾಹವಾದಾಗ ಸಿಕ್ಕ ಪತಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಆರನೆಯ ಗಂಡ ತುಂಬಾ ಒಳ್ಳೆಯ ಸ್ವಭಾವದವನಾಗಿದ್ದ. ಮಾತ್ರವಲ್ಲದೆ ​ ಆತನನ್ನು ಎರಡು ಬಾರಿ ವಿವಾಹವಾದೆ. ಇನ್ನು 8ನೇ ಪತಿ ಆನ್‌ಲೈನ್‌ ಮೂಲಕ ಪರಿಚಯವಾದ. 10ನೇ ಪತಿ ಶಾಲೆಯಿಂದ ಪರಿಚಯವಾದ ಎನ್ನುತ್ತಾಳೆ ಮೊನೆಟ್.

You may also like

Leave a Comment