Home » 16 ವರ್ಷ ಮೇಲ್ಪಟ್ಟ “ಮುಸ್ಲಿಂ” ಯುವತಿ ಆಕೆ ಇಷ್ಟಪಟ್ಟ ಪುರುಷನನ್ನು ವಿವಾಹವಾಗಬಹುದು: ಹೈಕೋರ್ಟ್

16 ವರ್ಷ ಮೇಲ್ಪಟ್ಟ “ಮುಸ್ಲಿಂ” ಯುವತಿ ಆಕೆ ಇಷ್ಟಪಟ್ಟ ಪುರುಷನನ್ನು ವಿವಾಹವಾಗಬಹುದು: ಹೈಕೋರ್ಟ್

0 comments

16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಯುವತಿ ತಾನು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಮದುವೆಯಾಗಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ದಂಪತಿಯ ರಕ್ಷಣೆ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಸ್ಚಿತ್ ಸಿಂಗ್ ಬೇಡಿ ಅವರು ಈ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ 21 ವರ್ಷದ ಯುವಕ ಮತ್ತು 16 ವರ್ಷದ ಯುವತಿ ಕುಟುಂಬ ಸದಸ್ಯರಿಂದ ತಮ್ಮ ರಕ್ಷಣೆಗಾಗಿ ಹರಿಯಾಣ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರ ಪ್ರಕಾರ, ಈ ದಂಪತಿಗಳು ಕೆಲ ವರ್ಷದಿಂದ ಪ್ರೀತಿ ಮಾಡುತ್ತಿದ್ದು, ಅದರಂತೆ 2022ರ ಜೂನ್ 8ರಂದು ಮುಸ್ಲಿಂ ವಿಧಿ ಮತ್ತು ವಿಧಿವಿಧಾನಗಳ ಪ್ರಕಾರ ವಿವಾಹವಾಗಿದ್ದಾರೆ. ಇನ್ನು ಇವರಿಗೆ ಪೋಷಕರಿಂದ ಜೀವ ಬೆದರಿಕೆ ಇದ್ದುದ್ದರಿಂದ ದಂಪತಿ ಪಠಾಣ್ ಕೋರ್ಟ್ ನ ಹಿರಿಯ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರು.

ಅರ್ಜಿದಾರರ ಪರ ವಕೀಲರು, ಮುಸ್ಲಿಂ ಕಾನೂನಿನಲ್ಲಿ ಋತುಮತಿಯಾಗುವುದು ಮತ್ತು ಪ್ರಾಪ್ತವಯಸ್ಕಳಾಗುವುದು ಒಂದೇ ಆಗಿರುತ್ತದೆ. ಹುಡುಗಿ 15 ವರ್ಷ ವಯಸ್ಸಿನಲ್ಲಿ ಋತುಮತಿಯಾಗುತ್ತಾಳೆ. ಪ್ರೌಢಾವಸ್ಥೆಗೆ ಬಂದ ಮುಸ್ಲಿಂ ಹುಡುಗ ಅಥವಾ ಮುಸ್ಲಿಂ ಹುಡುಗಿ ತಾನು ಇಷ್ಟಪಡುವ ಯಾರನ್ನಾದರೂ ಮದುವೆಯಾಗಲು ಸ್ವಾತಂತ್ರ್ಯವಿದೆ ಮತ್ತು ಪೋಷಕರಿಗೆ ಮಧ್ಯಪ್ರವೇಶಿಸುವ ಹಕ್ಕಿಲ್ಲ ಎಂದು ವಾದಿಸಿದರು.

ನ್ಯಾಯಮೂರ್ತಿ ಬೇಡಿ ಅವರು ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಸರಿಯಾಗಿದೆ ಎಂದು ನ್ಯಾಯಮೂರ್ತಿ ಬೇಡಿ ಸ್ಪಷ್ಟಪಡಿಸಿದ್ದಾರೆ. ಸರ್ ದಿನ್‌ಶಾ ಫರ್ದುಂಜಿ ಮುಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಅರ್ಜಿದಾರೆ 16 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಪ್ರವೇಶಿಸಲು ಸಮರ್ಥರಾಗಿದ್ದಾರೆ. ಅರ್ಜಿದಾರ ನಂ.1 (ಹುಡುಗ) ವಯಸ್ಸು 21 ವರ್ಷಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ಹೀಗಾಗಿ, ಇಬ್ಬರೂ ಅರ್ಜಿದಾರರು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರಾಗಿದ್ದಾರೆ ಎಂದು ಹೇಳಿದ್ದಾರೆ.

You may also like

Leave a Comment