Home » ಪ್ರೀತಿಯಿಂದ ಸಾಕಿದ ಬೆಕ್ಕುಗಳ‌ ಘೋರ ಕೃತ್ಯ | ಬರೋಬ್ಬರಿ 20 ಬೆಕ್ಕುಗಳು ಒಟ್ಟು ಸೇರಿ ಮನೆ ಯಜಮಾನಿಗೆ ಮಾಡಿದ್ದಾದರೂ ಏನು ?

ಪ್ರೀತಿಯಿಂದ ಸಾಕಿದ ಬೆಕ್ಕುಗಳ‌ ಘೋರ ಕೃತ್ಯ | ಬರೋಬ್ಬರಿ 20 ಬೆಕ್ಕುಗಳು ಒಟ್ಟು ಸೇರಿ ಮನೆ ಯಜಮಾನಿಗೆ ಮಾಡಿದ್ದಾದರೂ ಏನು ?

by Mallika
0 comments

ಎಷ್ಟೋ ಕಡೆ ಕೆಲವೊಂದು ವಿಚಿತ್ರ ನಮಗೆ ವಿಚಿತ್ರ ಹಾಗೂ ಅಚ್ಚರಿ ಪಡುವಂತೆ ಮಾಡುತ್ತದೆ. ಇಂಥ ನಿಜ ಘಟನೆಗಳನ್ನು ನಂಬುವುದಕ್ಕೆ ಸ್ವಲ್ಪ ಕಷ್ಟನೇ ಅಂತ ಹೇಳಬಹುದು. ಹೀಗಾಗಿ ಪ್ರಾಣಿ ಸಂಕುಲ, ಮನುಷ್ಯರು, ಮಹಿಳೆ, ಮಕ್ಕಳಿಗೆ ಸಂಬಂಧಿಸಿ ಬೆಚ್ಚಿ ಬೀಳಿಸುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಈಗ ಇಲ್ಲಿ ನಾವು ಹೇಳಲು ಹೊರಟಿರುವ ವಿಚಿತ್ರ ಘಟನೆ ಏನೆಂದರೆ, ಬೆಕ್ಕು ಮಹಿಳೆಯನ್ನು ಕಚ್ಚಿ ತಿಂದದ್ದು. ಅದು ಕೂಡಾ ಒಂದಲ್ಲ ಎರಡಲ್ಲ ಬರೋಬ್ಬರಿ 20 ಬೆಕ್ಕು.

ತಾನೇ ಪ್ರೀತಿಯಿಂದ ಸಾಕಿದ ಬೆಕ್ಕುಗಳು ಮಹಿಳೆಯ ಸಾವಿಗೆ ಕಾರಣವಾಗಿದೆ. ರಷ್ಯಾದಲ್ಲಿ ಮಹಿಳೆಯೊಬ್ಬರನ್ನು 20 ಬೆಕ್ಕುಗಳು ಕಚ್ಚಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎರಡು ವಾರಗಳ ನಂತರ ಮಹಿಳೆಯ ಕೆಲವು ದೇಹದ ಭಾಗಗಳು ಮಾತ್ರ ಉಳಿದುಕೊಂಡಿದ್ದು, ನಂತರ ಮಹಿಳೆಯ ಉಳಿದ ದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದ್ಯೋಗಿ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇದಾದ ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆಕೆಯ ಮನೆಯೊಳಗೆ ಹಸಿದ ಬೆಕ್ಕುಗಳಿಂದ ಸುತ್ತುವರಿದ ಮಹಿಳೆಯ ಭಾಗಶಃ ತಿಂದ ದೇಹವನ್ನು ಪೊಲೀಸರು ಕಂಡುಕೊಂಡರು.

ಮಹಿಳೆಯ ದೇಹದ ಅವಶೇಷಗಳು ಕೊಳೆಯಲು ಪ್ರಾರಂಭಿಸಿದ್ದರಿಂದ ಎರಡು ವಾರಗಳ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯು ರಷ್ಯಾದ ರೋಸ್ಟೋವ್ ಪ್ರದೇಶದ ಬಟಾಯ್ಸ್ ಪ್ರದೇಶದಲ್ಲಿ ನಡೆದಿದೆ.

ಪ್ರಾಣಿ ರಕ್ಷಣಾ ತಜ್ಞರು ಹೇಳುವ ಪ್ರಕಾರ, “ಬೆಕ್ಕುಗಳನ್ನು ಎರಡು ವಾರಗಳ ಕಾಲ ಮನೆಯಲ್ಲಿ ಒಂಟಿಯಾಗಿ ಬಿಡಲಾಗಿತ್ತು, ಅವುಗಳಿಗೆ ತಿನ್ನಲು ಏನೂ ಇರಲಿಲ್ಲ. ಹಾಗಾಗಿ ಹಸಿದಿದ್ದ ಬೆಕ್ಕುಗಳು ಮಹಿಳೆಯನ್ನೇ ತಿಂದು ಮುಗಿಸಿದೆ. ಈ ಘಟನೆ ನಿಜವಾಗಲೂ ಯಾರನ್ನಾದರೂ ಒಂದು ಕ್ಷಣ ಬೆಚ್ಚಿ ಬೀಳಿಸುವುದರಲ್ಲಿ ಎರಡು ಮಾತಿಲ್ಲ.

You may also like

Leave a Comment