2
Tumakur: ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿಒಂದೇ ಗ್ರಾಮದ 4 ಮಕ್ಕಳು ನಾಪತ್ತೆಯಾದ ದುರಂತ ಘಟನೆಯೊಂದು ಬೆಳಕಿಗೆ ಬಂದಿದ್ದು, ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.
ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ನಾಪತ್ತೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. ಆಟವಾಡೋದಕ್ಕಾಗಿ ಮನೆಯಿಂದ ತೆರಳಿದ 15-16 ವರ್ಷದ ಮಕ್ಕಳು ವಾಪಸ್ ಬರಲಿಲ್ಲ ಎಂಬ ಕಾರಣಕ್ಕೆ ಹುಡುಕಾಟ ನಡೆಸಿದ್ರು ಪತ್ತೆಯಾಗಿಲ್ಲ ಬಳಿಕ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ.
ಬಳಿಕ ಗ್ರಾಮಸ್ಥರಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗಿದ್ಯಾ ಅನ್ನುವ ಅನುಮಾನ ಕಾಡತೊಡಗಿದೆ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ.
ಇದನ್ನೂ ಓದಿ:ಸಿಎಂ, ಡಿಸಿಎಂ ಪ್ರಮಾಣವಚನ ಬೆನ್ನಲ್ಲೆ ಕ್ರೀಡಾಂಗಣದ ಬಳಿ 15 ಟನ್ ತ್ಯಾಜ್ಯ ಸಂಗ್ರಹ.!
