Home » Good News: ರಾಜ್ಯ ಪೋಲಿಸರಿಗೆ ಭರ್ಜರಿ ಗುಡ್ ನ್ಯೂಸ್- ಸದ್ಯದಲ್ಲೇ ಜಾರಿಯಾಗಲಿದೆ ನಿಮ್ಮ ಬಹು ಬೇಡಿಕೆಯ ಈ ಯೋಜನೆ !! ಸರ್ಕಾರದಿಂದ ಮಹತ್ವದ ಘೋಷಣೆ

Good News: ರಾಜ್ಯ ಪೋಲಿಸರಿಗೆ ಭರ್ಜರಿ ಗುಡ್ ನ್ಯೂಸ್- ಸದ್ಯದಲ್ಲೇ ಜಾರಿಯಾಗಲಿದೆ ನಿಮ್ಮ ಬಹು ಬೇಡಿಕೆಯ ಈ ಯೋಜನೆ !! ಸರ್ಕಾರದಿಂದ ಮಹತ್ವದ ಘೋಷಣೆ

0 comments

Good News: ರಾಜ್ಯ ಸರ್ಕಾರ(Government )ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನ ಸೆಳೆಯುತ್ತಿದೆ. ಇದೀಗ, ರಾಜ್ಯದ ಪೋಲಿಸ್ ಸಿಬ್ಬಂದಿಗೆ ಶುಭ ಸುದ್ದಿಯೊಂದು(Good News)ಹೊರಬಿದ್ದಿದೆ. ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ್ (G . Parameshwara)ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ 6 ನೇ ವೇತನ ಆಯೋಗ(6th Pay Commission)ಜಾರಿಗೊಳಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಗೃಹ ಸಚಿವರು ಶೀಘ್ರದಲ್ಲೇ 6 ನೇ ವೇತನ ಆಯೋಗ ಜಾರಿಗೊಳಿಸಲಾಗುವ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಸಿಗಬೇಕಾದ ಸರಿಸಮಾನ ವೇತನ, ಭತ್ಯೆ ಸಿಗುವ ಪೂರಕ ವ್ಯವಸ್ಥೆ ಮಾಡುವ ಕುರಿತಂತೆ ಸಚಿವರು ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಬಡ್ತಿ ನೀಡುವ ಕುರಿತು ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಬೇಕಾಗಿದೆ. ಅಂತರ್ ವಲಯ ವರ್ಗಾವಣೆಯಿಂದ ಹಿರಿಯ ಅಧಿಕಾರಿಗಳಿಗೆ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.

You may also like

Leave a Comment