Home » 7 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು| ಗಂಡನ ಮೇಲೆ ಕೊಲೆ ಆರೋಪ ಮಾಡಿದ ಪೋಷಕರು

7 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು| ಗಂಡನ ಮೇಲೆ ಕೊಲೆ ಆರೋಪ ಮಾಡಿದ ಪೋಷಕರು

2 comments

ಆಕೆ ತುಂಬು ಗರ್ಭಿಣಿ. ತಾಯ್ತನದ ಸುಖ ಅನುಭವಿಸುವ ಕಾತುರತೆಯಲ್ಲಿದ್ದ ಯುವತಿ. ಆದರೆ ವಿಧಿಯಾಟ ಬೇರೆ ಇತ್ತು ಎಂದು ಕಾಣುತ್ತದೆ. ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಮಾಡಲಾಗಿದೆ.

ವಿಜಯನಗರ ನಿವಾಸಿ ಅಶ್ವಿನಿ ಎಂಬುವಳೇ (23) ಮೃತ ಗರ್ಭಿಣಿ. ಮೈಸೂರು ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ ಮನೆಗೆ ಬಂದಿದ್ದ ಪ್ರಮೋದ್ ತನ್ನ ಪತ್ನಿಯನ್ನು ಕರೆದೊಯ್ದಿದ್ದ. ಇದೀಗ ತುಂಬು ಗರ್ಭಿಣಿಯ ಶವ ಕೆರೆಯಲ್ಲಿ ಪತ್ತೆಯಾಗಿದ್ದಾಳೆ.

ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದು, ಇದೀಗ ಜಾತಿ ನೆಪದಲ್ಲಿ ನಿಂದಿಸಿ ಕೊಲೆ ಮಾಡಿದ್ದಾನೆ, ಅಳಿಯನೇ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಎಂದು ಮೃತಳ ಪೋಷಕರು ದೂರನ್ನು ನೀಡಿದ್ದಾರೆ.

ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment