Home » 80 ರ ವಯಸ್ಸಿನಲ್ಲಿ ಇನ್ನೊಂದು ಮದುವೆಗೆ ಮ್ಯಾಟ್ರಿಮೋನಿಯಲ್ಲಿ ನೋಂದಾಯಿಸಿಕೊಂಡ ತಂದೆ !! | ಇದನ್ನು ಆಕ್ಷೇಪಿಸಿದ ಮಗನಿಂದ ತಂದೆಯ ಬರ್ಬರ ಹತ್ಯೆ

80 ರ ವಯಸ್ಸಿನಲ್ಲಿ ಇನ್ನೊಂದು ಮದುವೆಗೆ ಮ್ಯಾಟ್ರಿಮೋನಿಯಲ್ಲಿ ನೋಂದಾಯಿಸಿಕೊಂಡ ತಂದೆ !! | ಇದನ್ನು ಆಕ್ಷೇಪಿಸಿದ ಮಗನಿಂದ ತಂದೆಯ ಬರ್ಬರ ಹತ್ಯೆ

0 comments

ಇಳಿವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಲು ಮ್ಯಾಟ್ರಿಮೋನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ 80 ವರ್ಷದ ತಂದೆಯನ್ನು ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಶಂಕರ್ ರಾಂಭೌ ಬೋರ್ಹಾಡೆ ಎನ್ನುವವರು ಮಗ ಶೇಖರ ಎಂಬಾತನಿಂದ ಕೊಲೆಯಾಗಿದ್ದಾರೆ. 80 ವರ್ಷ ವಯಸ್ಸಾದರೂ ಈ ವಯಸ್ಸಿನಲ್ಲಿ ನಿನಗೆ ಮತ್ತೊಂದು ಮದುವೆ ಏಕೆ ಎಂದು ಅಪ್ಪ-ಮಗನ ನಡುವೆ ಜಗಳವಾಗಿ ಕೊನೆಗೆ ಸಿಟ್ಟಿನಿಂದ ಮಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಅಪ್ಪ-ಮಗ ವಾಸಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಶಂಕರ್ ಅವರ ಪತ್ನಿ ತೀರಿಕೊಂಡಿದ್ದರು. ಈ ಇಳಿ ವಯಸ್ಸಿನಲ್ಲಿ ಆಸರೆಯಾಗಿ ಪತ್ನಿ ಇರಬೇಕು ಎಂದಿದ್ದ ಶಂಕರ್ ಅವರು, ಮಗನ ವಿರೋಧದ ನಡುವೆಯೂ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಇದನ್ನು ಕಂಡು ಮಗ ಶೇಖರ್ ವಿಪರೀತ ಕೋಪಗೊಂಡಿದ್ದರು.

ನಂತರ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮಗ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯನ್ನು ನೋಡಿದ ಶೇಖರ್, ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾನೆ. ಇಷ್ಟು ಮಾಡಿ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ತಾನೇ ಒಪ್ಪಿಕೊಂಡು ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೇಖರ್‌ನನ್ನು ಬಂಧಿಸಿದ್ದಾರೆ.

You may also like

Leave a Comment