Aadhaar card : ಹೆಚ್ಚಿನ ಜನರು ಮೊದಲ ಬಾರಿಗೆ ಈ ಹಿಂದೆ ಆಧಾರ್ ಕಾರ್ಡ್ ಮಾಡುವಾಗ ಹಲವು ತಪ್ಪುಗಳನ್ನು ಮಾಡಿರುತ್ತಾರೆ. ಅಥವಾ ಆಧಾರ್ ಕಾರ್ಡ್ ತಯಾರಿಸುವಾಗ ಹಲವಾರು ಪ್ರಿಂಟ್ ಮಿಸ್ಟೇಕ್ ಗಳು ನಡೆದಿರುತ್ತವೆ. ಆದುದರಿಂದ ಆಯಾ ತಪ್ಪುಗಳನ್ನು ಸರಿ ಮಾಡಲು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅನಿವಾರ್ಯವಾಗುತ್ತದೆ. ಆಧಾರ್ ಕಾರ್ಡ್(Aadhaar card ) ಇದೀಗ ಒಂದು ಬಹುಪಯೋಗಿ ಕಾರ್ಡ್ ಆಗಿದ್ದು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೆ ಹಣಕಾಸು ವ್ಯವಹಾರಗಳಿಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಪಾಸ್ಪೋರ್ಟ್ ಮುಂತಾದ ವಿದೇಶಿ ಪ್ರಯಾಣದ ಅಗತ್ಯಗಳಿಗೆ ಆಧಾರ ಮುಖ್ಯವಾಗುತ್ತದೆ. ಆದುದರಿಂದ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ತಪ್ಪುಗಳಿಲ್ಲದೆ ಇರುವುದು ತೀರ ಅಗತ್ಯದ ವಿಷಯ. ಇವತ್ತು ಈ ಲೇಖನದ ಮೂಲಕ ಆಧಾರ್ ಕಾರ್ಡಿನಲ್ಲಿ ಇರುವ ಆ 7 ಪ್ರಮುಖ ತಪ್ಪುಗಳು=ಯಾವುವು ಮತ್ತು ಅದನ್ನು ಯಾವ ಕಾರಣಕ್ಕಾಗಿ ಸರಿ ಮಾಡಿಕೊಳ್ಳಬೇಕು. ಎನ್ನುವ ಬಗ್ಗೆ ತಿಳಿದುಕೊಳ್ಳೋಣ.
ಯಾವೆಲ್ಲ ಕಾರಣಕ್ಕಾಗಿ ಆಧಾರ್ ಅನ್ನು ಅಪ್ಡೇಟ್ ಮಾಡಬೇಕು ?
1. ನಿಮ್ಮ ಹೆಸರಿನಲ್ಲಿ ಸಮಸ್ಯೆ ಕಂಡು ಬಂದರೆ ಅಂದರೆ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ಆಧಾರ್ ಅಪ್ಡೇಟ್ ಮಾಡಿ.
2. ನಿಮ್ಮ ಹೆಸರಿನ ಒಂದು ಭಾಗ ಬಿಟ್ಟು ಹೋಗಿದ್ದರೆ, ಸರ್ ನೇಮ್ ಇತ್ಯಾದಿ ತಪ್ಪಿದ್ದಲ್ಲಿ, ಆಗ ಆಧಾರ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
3. ಆಧಾರ್ ಕಾರ್ಡ್ ನಲ್ಲಿ ಅಪ್ಪನ ಹೆಸರು ತಪ್ಪಿದ್ದಲ್ಲಿ
4. ಹುಟ್ಟಿದ ದಿನಾಂಕದಲ್ಲಿ ತಪ್ಪಿದ್ದರೆ ಅಪ್ಡೇಟ್ ಅನಿವಾರ್ಯ
5. ಅಡ್ರೆಸ್ ನಲ್ಲಿ ತಪ್ಪಿದ್ದರೆ, ಅಥವಾ ಅಡ್ರೆಸ್ ಬದಲಾಗಿದ್ದರೆ, ಆಗ ಆಧಾರ್ ಅಪ್ಡೇಟ್ ಮಾಡಿಕೊಳ್ಳುವುದು ಅನಿವಾರ್ಯ
6. ಆಧಾರ್ ಗೆ ಕೊಟ್ಟ ಫೋನ್ ನಂಬರ್ ಬದಲಾಗಿದ್ದರೆ ಆಗ್ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು, ಯಾಕೆಂದರೆ UPI ಪೇಮೆಂಟ್ ಆಧಾರ್ ನಲ್ಲಿ ಕೊಟ್ಟ ಫೋನ್ ನಂಬರ್ ಗೆ ಲಿಂಕ್ ಆಗುತ್ತದೆ.
7. ಆಧಾರ್ ನಲ್ಲಿ ಬರೆದ ಲಿಂಗ ಮತ್ತು ನಿಜವಾದ ಲಿಂಗ (Sex) ತಪ್ಪಾಗಿದ್ದರೆ ಆಗ ಆಧಾರ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಕೆಲವು ಸಲ ಸೆಲೆಕ್ಷನ್ ಮಾಡುವಾಗ ತಪ್ಪಾಗಿ ಲಿಂಗ ಬದಲಾವಣೆ ಆಗಿರುತ್ತದೆ. ಮತ್ತೆ ಕೆಲವು ಬಾರಿ, ತೀರ ಅಪರೂಪಕ್ಕೆ ವ್ಯಕ್ತಿಗಳು ಲಿಂಗ ಬದಲಾವಣೆ ಮಾಡಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ಕೂಡ ಲಿಂಗ ಅಥವಾ Sex ಅನ್ನು ಆಧಾರ್ ಕಾರ್ಡ್ ನಲ್ಲಿ ಸರಿಯಾಗಿ ನಮೂದಿಸಬೇಕು.
ಆಧಾರ್ ಕಾರ್ಡ್ ಯಾಕೆ ಅಪ್ಡೇಟ್ ಮಾಡಿಕೊಳ್ಳಬೇಕು ?
ಈ ಮೊದಲೇ ಹೇಳಿದಂತೆ ಆಧಾರ್ ಕಾರ್ಡ್ ಇದೀಗ ಎಲ್ಲಾ ರೀತಿಯ ವ್ಯವಹಾರಗಳಿಗೂ ಲಿಂಕ್ ಆಗುತ್ತಿದೆ ಆದುದರಿಂದ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಹೆಸರು, ವಿಳಾಸ ಹುಟ್ಟಿದ ದಿನಾಂಕ, ತಂದೆಯ ಹೆಸರು ಇತ್ಯಾದಿ ವಿವರಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಅಥವಾ ಸರ್ಕಾರಿ ಇತರ ದಾಖಲೆಗಳಿಗೆ ಕೂಡ ಹೊಂದಿಕೊಳ್ಳಬೇಕು. ಆದ್ದರಿಂದ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗಬಹುದು. ಅಥವಾ ನೀವು ಸರ್ಕಾರದಿಂದ ದೊರೆಯುವ ಹಲವು ಸೌಲಭ್ಯಗಳಿಂದ ವಂಚಿತರಾಗಬಹುದು.
ಆಧಾರ್ ಕಾರ್ಡ್ ನಿಮ್ಮ ಯುನಿಕ್ ಐಡೆಂಟಿಟಿ, ಅಂದರೆ ಈ ನಂಬರ್ ನಿಮ್ಮ ಸ್ವಂತ ಅಸ್ತಿತ್ವದ ನಂಬರ್. ಒಬ್ಬರು ಇನ್ನೊಬ್ಬರಂತೆ ಹೇಗೆ ಇರೋದಿಲ್ಲವೋ ಅದೇ ರೀತಿ ಆಧಾರ್ ಕಾರ್ಡ್ ಒಬ್ಬರಿಗೆ ಒಂದೇ ಕೊಡುವುದು. ಈಗ ಎಲ್ಲಾ ಸರ್ಕಾರಿ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಆಗಿರುವ ಕಾರಣ ನಿಮ್ಮ ಆಧಾರಿನಲ್ಲಿರುವ ಎಲ್ಲಾ ಅಂಶಗಳು ನಿಮ್ಮ ಇತರ ದಾಖಲಾತಿಗಳಲ್ಲಿರುವ ಅಂಶಗಳಿಗೆ ಹೊಂದಿಕೊಳ್ಳಬೇಕು.
ಇದನ್ನೂ ಓದಿ: ಚಂದ್ರ ಗ್ರಹಣ ಬಳಿಕ, ಇಂದು ತಕ್ಷಣ ಈ 8 ಕೆಲಸಗಳನ್ನು ಮಾಡಿ, ಕೆಟ್ಟ ದೃಷ್ಟಿಯಿಂದ ಬಚಾವ್ ಆಗಿ !
