Home » Aadhaar Update: “ಆಧಾರ್” ಗೆ ಬೇರೆ ಫೋನ್ ನಂಬರ್ ಲಿಂಕ್ ಮಾಡಬೇಕಾ ? ಚಿಟಿಕೆ ಹೊಡೆಯುವಷ್ಟರಲ್ಲಿ ಹೊಸ ನಂಬರ್ ಸೇರಿಸಿ !

Aadhaar Update: “ಆಧಾರ್” ಗೆ ಬೇರೆ ಫೋನ್ ನಂಬರ್ ಲಿಂಕ್ ಮಾಡಬೇಕಾ ? ಚಿಟಿಕೆ ಹೊಡೆಯುವಷ್ಟರಲ್ಲಿ ಹೊಸ ನಂಬರ್ ಸೇರಿಸಿ !

0 comments

Aadhaar Card Update: ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ (Aadhaar Card Update) ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ. ನಿವೇನಾದರೂ ಆಧಾರ್’ಗೆ ಬೇರೆ ಫೋನ್ ನಂಬರ್ (Mobile number) ಲಿಂಕ್ ಮಾಡಬೇಕಾ ? ಹಾಗಿದ್ರೆ ಈ ಮಾಹಿತಿ ಓದಿ, ಚಿಟಿಕೆ ಹೊಡೆಯುವಷ್ಟರಲ್ಲಿ ಹೊಸ ನಂಬರ್ ಸೇರಿಸಿ!.

ಆಧಾರ್ ನಲ್ಲಿ ಹೊಸ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ?

ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಕಳೆದುಕೊಂಡಿದ್ದರೆ ಅಥವಾ
ಆಧಾರ್ ಕಾರ್ಡ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದರೆ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ. Aadhaar Enrolment / Correction Update Form ಭರ್ತಿ ಮಾಡಿ ನೀಡಿ.

ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ನೇಮಕಾತಿ ಪಡೆಯುವುದು ಹೇಗೆ?

• uidai.gov.in ವೆಬ್ ಪೋರ್ಟಲ್ ಗೆ ಭೇಟಿ ನೀಡಿ.
• ಅಪ್ಡೇಟ್ ಮಾಡುವ ಪೋನ್ ನಂಬರ್ ನಮೂದಿಸಿ, ನಂತರ ಕ್ಯಾಪ್ಟಾವನ್ನು ಟೈಪ್ ಮಾಡಿ.
• ನಿಮ್ಮ ನೋಂದಾಯಿತ ಫೋನ್ ನಂಬರ್ ಗೆ ‘Send OTP’
ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಿಮಗೆ ಬಂದ OTP ನೀಡಿ
• ಆನ್ಲೈನ್ ಆಧಾರ್ ಸೇವೆಗಳು ಎಂಬ ಡ್ರಾಪ್-ಡೌನ್ ಆಯ್ಕೆಯನ್ನು ಪ್ರದರ್ಶಿಸುತ್ತದೆ.
• ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಆಯ್ಕೆಯನ್ನು ಆರಿಸಿ
• ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಹೊಸ ಪುಟ ತೆರೆಯುತ್ತದೆ. ಅಲ್ಲಿ ಕ್ಯಾಪ್ಟಾವನ್ನು ನಮೂದಿಸಬೇಕು.
• OTP ಬರುತ್ತದೆ. ನೀವು OTP ಅನ್ನು ದೃಢೀಕರಿಸಿದ ನಂತರ ‘ಸೇವ್ ಆಂಡ್ ಕಂಟಿನ್ಯೂ’ ಮೇಲೆ ಕ್ಲಿಕ್ ಮಾಡಿ
• ಆನ್ನೈನ್ ಅಪಾಯಿಂಟೆಂಟ್ ಮಾಡಿ ಶುಲ್ಕವನ್ನು ಪಾವತಿಸಿ. ಇದರ ಪಾರ್ಟಿಯನ್ನು ಪ್ರಿಂಟ್ ಔಟ್ ಪಡೆದು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ತೆರಳಿ
• ನೀವು ಮೊಬೈಲ್ ನಂಬರ್ ಅಪ್​ಡೇಟ್​ಗೆ ಮನವಿ ಸಲ್ಲಿಸಿದ ಬಳಿಕ ಅದು ಡಾಟಾಬೇಸ್​ನಲ್ಲಿ ಯಶಸ್ವಿಯಾಗಿ ಅಪ್​ಡೇಟ್ ಆಗಲು 90 ದಿನ ಬೇಕಾಗಬಹುದು.

ಈ ಮಧ್ಯೆ 10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ . ಅಲ್ಲದೆ, ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಯುಐಡಿಎಐ 2023ರ ಸೆಪ್ಟೆಂಬರ್ 14ರ ತನಕ ಅವಕಾಶ ಕಲ್ಪಿಸಿದೆ.

You may also like