Home » ಮುತ್ಯಾಲಮ್ಮ ಜಾತ್ರೆಯಲ್ಲಿ ಅವಘಡ: ಕುಸಿದು ಬಿದ್ದು ಹೃದಯಾಘಾತಗೊಂಡು ಯುವಕ ಸಾವು

ಮುತ್ಯಾಲಮ್ಮ ಜಾತ್ರೆಯಲ್ಲಿ ಅವಘಡ: ಕುಸಿದು ಬಿದ್ದು ಹೃದಯಾಘಾತಗೊಂಡು ಯುವಕ ಸಾವು

0 comments
Muthyalamma fair

Muthyalamma fair: ಬೆಂಗಳೂರು ಗ್ರಾಮಾಂತರದಲ್ಲಿ ಪ್ರಸಿದ್ಧಿ ಪಡೆದ ಮುತ್ಯಾಲಮ್ಮ ಜಾತ್ರೆಯಲ್ಲಿ (Muthyalamma fair) ಅವಘಡ ಸಂಭವಿಸಿದ್ದು, ಕುಸಿದು ಬಿದ್ದು ಯುವಕ ಸಾವನ್ನಪಿದ್ದಾನೆ ಎಂದು ವರದಿಯಾಗಿದೆ.

ಪ್ರತಿ ವರ್ಷದಂತೆ ಈವರ್ಷವೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುತ್ಯಾಲಮ್ಮ ಜಾತ್ರೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಾತ್ರೆಗೆಂದು ಬಂದಿದ್ದ ಯುವಕನೊಬ್ಬ ಆಟವಾಡುತ್ತಿದ್ದಂತೆ ಕುಸಿದು ಬಿದ್ದಿದ್ದಾನೆ, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಹೃದಯಘಾತಗೊಂಡು ಸಾವನ್ನಪ್ಪಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಶ್ರೇಯಸ್ ದೊಡ್ಡಬಳ್ಳಾಪುರದ ಶಾಂತಿನಗರದ ಮಂಜುನಾಥ್ ಎಂಬುವರ ಪುತ್ರ ಎಂದು ಗುರುತಿಸಲಾಗಿದೆ. ಅದ್ದೂರಿಯಾಗಿ ನಡೆಯುತ್ತಿದ್ದ ಜಾತ್ರೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದಂತೂ ನಿಜ..

ಇದನ್ನೂ ಓದಿ:Gnanavapi Masjid – Adi Vishweshwar Temple: ಜ್ಞಾನವಾಪಿ ಪ್ರಕರಣ: ಯಾವುದೇ ಶಿವಲಿಂಗ ಪತ್ತೆಯಾಗಿಲ್ಲ- ಮಸೀದಿ ಸಮಿತಿ

 

You may also like

Leave a Comment