Gujarat: ಸಮೋಸಾದಲ್ಲಿ (Samosa) ಗೋಮಾಂಸ ತುಂಬಿಸಿ, ಅದನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಅಚ್ಚರಿಯ ಘಟನೆ ಗುಜರಾತ್’ ನಲ್ಲಿ (Gujarat) ನಡೆದಿದೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಸ್ಮಾಯಿಲ್ ಯುಸೂಫ್ ಎಂದು ಹೇಳಲಾಗಿದೆ.
ಇಸ್ಮಾಯಿಲ್ ಯುಸೂಫ್ ಸೂರತ ಜಿಲ್ಲೆಯ ಕೋಸಾಡಿ ಗ್ರಾಮದಲ್ಲಿ ಖಾದ್ಯಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ. ಇದರ ಜೊತೆಗೆ ಗೋಮಾಂಸ ತುಂಬಿದ್ದ ಸಾಮೋಸವನ್ನೂ ಗ್ರಾಹಕರಿಗೆ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ, ಗೋಮಾಂಸವನ್ನು ತುಂಬಿದ ಸಮೋಸಾಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಬಂಧಿತ ಆರೋಪಿ ಯುಸೂಫ್ ಮಾಹಿತಿ ಬಹಿರಂಗಪಡಿಸಿದ್ದು, ಕೊಸಾಡಿ ಗ್ರಾಮದ ನದಿ ದಡದ ಬಳಿ ಸುಲೇಮಾನ್ ಮತ್ತು ನಗೀನ ವಸಾವಾ ಗೋಹತ್ಯೆ ಮಾಡುತ್ತಾರೆ. ಅವರಿಂದ ಗೋಮಾಂಸವನ್ನು ಖರೀದಿಸಿ, ಅದರಲ್ಲಿ ಸಮೋಸ ತಯಾರಿಸುತ್ತಿದ್ದೆ ಎಂದು ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನು ವಶಪಡಿಸಿಕೊಂಡಿರುವ ಸಾಮೋಸಗಳಲ್ಲಿ ಗೋಮಾಂಸ ಇರುವ ಬಗ್ಗೆ ಪರೀಕ್ಷೆ ನಡೆಸಿದ್ದು, ಪ್ರಮಾಣಪತ್ರದಲ್ಲಿ ಸಾಮೋಸಗಳಲ್ಲಿ ಗೋಮಾಂಸವಿರುವುದು ಖಚಿತವಾಗಿದೆ. ಸದ್ಯ ಆರೋಪಿ ವಿರುದ್ಧ ದೂರು ದಾಖಲಾಗಿದೆ.
ಈ ಹಿಂದೆ ಬೆಳ್ತಂಗಡಿಯ ಮರೋಡಿಯಲ್ಲಿ ಗೋ ಹತ್ಯೆ ಮಾಡಿದ್ದು,
ಅಕ್ರಮ ಕಸಾಯಿಖಾನೆಗೆ ಬಜರಂಗದಳ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ರಕ್ತಸಿಕ್ತವಾದ ಗೋವಿನ ದೇಹದ ಭಾಗಗಳ ಸಹಿತ ವಾಹನ ವಶಕ್ಕೆ ಪಡೆದಿದ್ದಾರೆ.
