Kiccha Sudeep : ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಬಹಿರಂಗ ಗುದ್ದಾಟ ವಿಪರೀತ ಜೋರಾಗುತ್ತಿದೆ. ಕಿಚ್ಚ ಸುದೀಪ್ ಅವರು ಕೂಡ ಈ ಕುರಿತು ಕೆಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಅಲ್ಲದೆ ಕೆಲ ನಟ ನಟಿಯರು ಈ ವಿಚಾರವನ್ನು ತಣ್ಣಗಾಗಿಸಬೇಕೆಂದು ಮನವಿ ಮಾಡಿದ್ದಾರೆ. ಈಗ ತಾನೇ ಈ ವಿಚಾರಕ್ಕೆ ತುಪ್ಪ ಸುರಿಯುವಂತೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮಗೆ ಬಂದಿರುವ ಬ್ಯಾಡ್ ಕಮೆಂಟ್ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ದರ್ಶನ್ ಜೊತೆಗಿನ ಫೋಟೋ ಒಂದಕ್ಕೆ ಟ್ವೀಟ್ ಮಾಡಿದ್ದಾರೆ.
ಹೌದು, ಅಭಿಮಾನಿಯೊಬ್ಬರು ದರ್ಶನ್ ಮತ್ತು ಸುದೀಪ್ ಜೊತೆಗಿರುವ ಫೋಟೋ ಹಂಚಿಕೊಂಡು ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ಯಾವಾಗಲೂ ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ದರ್ಶನ್ ಜೊತೆಗೆ ತಾವು ಇರುವ ಫೋಟೋಗೆ ರಿಪ್ಲೈ ಮಾಡಿದ್ದರಿಂದ ಜಾಲತಾಣದಲ್ಲಿ ಅದು ಪುನಃ ಶೇರ್ ಆಗಿದೆ.
