Home » AirTel ಗ್ರಾಹಕರಿಗೆ ಭರ್ಜರಿ ಆಫರ್!

AirTel ಗ್ರಾಹಕರಿಗೆ ಭರ್ಜರಿ ಆಫರ್!

by Mallika
0 comments

ಏರ್‌ಟೆಲ್ ತನ್ನ ಗ್ರಾಹಕರಿಗೆ ಉಚಿತ ಆಫರ್ ಘೋಷಿಸಿದೆ. ಅನ್‌ಲಿಮಿಟೆಡ್ ಕಾಲ್, 75 ಜಿಬಿ ಉಚಿತ ಡೇಟಾ, ಇದರ ಜೊತೆಗೆ 6 ತಿಂಗಳ ವರೆಗೆ ಅಮೇಜಾನ್ ಪ್ರೈಮ್ ಹಾಗೂ ಹಾಟ್‌ಸ್ಟಾರ್ ಸಂಪೂರ್ಣ ಉಚಿತವಾಗಿದೆ. ಏರ್ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆಯಡಿ ಈ ಸೌಲಭ್ಯವನ್ನು ಪಡೆದುಕೊಳ್ಳುಬಹುದು.

ಅಷ್ಟು ಮಾತ್ರವಲ್ಲದೇ, ಏರ್‌ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆಯಡಿಯಲ್ಲಿ ಎರಡನೇ ಸಿಮ್ ಖರೀದಿಸಿದರೆ, ಈ ಉಚಿತ ಆಫರ್ ನಿಮ್ಮದಾಗಲಿದೆ. ಪ್ಲಾನ್ 499 ರೂಪಾಯಿ ಫ್ಯಾಮಿಲಿ ಪ್ಲಾನ್ ಹಾಕಿಕೊಂಡರೆ ಅನಿಯಮಿತ ಸ್ಥಳೀಯ ಕರೆ, ಎಸ್‌ಟಿಡಿ ಹಾಗೂ ರೋಮಿಂಗ್ ಕರೆಗಳು ನಿಮಗೆ ಉಚಿತವಾಗಿ ಸಿಗಲಿದೆ. ಇನ್ನು ಪ್ರತಿ ತಿಂಗಳು 75 ಜಿಬಿ ಉಚಿತ ಡೇಟಾ ಸಿಗಲಿದೆ. ಇದರ ಜೊತೆಗೆ 200 ಜಿಬಿ ಜೇಟಾ ರೋಲ್ ಓವರ್ ಕೂಡ ಸಿಗಲಿದೆ. ಇದರ ಜೊತೆಗೆ ನಿಮಗೆ ಪ್ರತಿ ದಿನ 100 ಎಸ್ಎಂಎಸ್ ಕೂಡ ಸಿಗಲಿದೆ.

ಗ್ರಾಹಕರಿಗೆ ಇದರ ಜೊತೆಗೆ ಉಚಿತದ ಮತ್ತೊಂದು ಕೂಡುಗೆ ಸಿಗಲಿದೆ. ಹೌದು, ಈ ಕೊಡುಗೆಯಲ್ಲಿ ಒಟಿಟಿ ಫ್ಲಾಟ್‌ಫಾರ್ಮ್ ಉಚಿತವಾಗಿ ಸಿಗಲಿದೆ. ಪ್ರಮುಖವಾಗಿ ಅಮೆಜಾನ್ ಪ್ರೈಮ್, ನೆಟ್‌ಫಿಕ್ಸ್ ಹಾಗೂ ಹಾಟ್‌ಸ್ಟಾರ್ 6 ತಿಂಗಳ ಕಾಲ ಉಚಿತವಾಗಲಿದೆ.

ಇಂದು ಬಹುತೇಕ ಮನೆಗಳು ಒಟಿಟಿ ಫ್ಲಾಟ್‌ಫಾರ್ಮ್ ನೆಚ್ಚಿಕೊಂಡಿದೆ. ಅದರಲ್ಲೂ ಎಲ್ಲರು ಜೊತೆಯಾಗಿ ಟಿವಿ ನೋಡುವ ಕಾಲವೂ ಮರೆಯಾಗುತ್ತಿದೆ. ಅವರಿಷ್ಟದ ಹಾಗೂ ಆಸಕ್ತಿಯ ಕ್ಷೇತ್ರಗಳ ವಿಡಿಯೋಗಳನ್ನು, ಸುದ್ದಿಗಳನ್ನು ನೋಡುವುದೆ ಹೆಚ್ಚು. ಹೀಗಾಗಿ ಏರ್‌ಟೆಲ್ ಹೊಸ ಆಫರ್ ಉಪಯುಕ್ತವಾಗಿದೆ.

ಈ ಏರ್‌ಟೆಲ್ ಫ್ಯಾಮಿಲಿ ಪ್ಲಾನ್ ಮನೆ ಮಂದಿಗೆ ಸೂಕ್ತವಾಗಿದೆ ಎಂದೇ ಹೇಳಬಹುದು. ಪ್ರತಿಯೊಬ್ಬರ ಮೊಬೈಲ್‌ಗೆ ಬೇರೇ ಬೇರೆ ರಿಚಾರ್ಜ್ ಮಾಡಿಸಿ ನೆಚ್ಚಿನ ವೀಡಿಯೋಗಳನ್ನು ಅಥವಾ ಒಟಿಟಿ ಫ್ಲಾಟ್‌ಫಾರ್ಮ್ ಬಳಕೆ ಮಾಡುವುದು ಕಷ್ಟ. ಹೀಗಾಗಿ ಏರ್‌ಟೆಲ್ ಫ್ಯಾಮಿಲಿ ಪ್ಲಾನ್ ಆಫರ್ ಘೋಷಿಸಿದೆ.

You may also like

Leave a Comment