Home » ಗ್ರಾಹಕರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ ಏರ್ಟೆಲ್ |ಡೇಟಾ ಮತ್ತು ಕರೆಗಳ ದರ ಶೇ.20 ರಿಂದ 25ರಷ್ಟು ಏರಿಕೆ!

ಗ್ರಾಹಕರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ ಏರ್ಟೆಲ್ |ಡೇಟಾ ಮತ್ತು ಕರೆಗಳ ದರ ಶೇ.20 ರಿಂದ 25ರಷ್ಟು ಏರಿಕೆ!

0 comments

ನವದೆಹಲಿ : ಭಾರತದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್ ಗ್ರಾಹಕರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ್ದು, ಡೇಟಾ ಮತ್ತು ಕರೆಗಳ ದರ ಶೇ.20 ರಿಂದ 25ರಷ್ಟು ಏರಿಕೆ ಮಾಡಿದೆ.

ಈ ಕುರಿತು ಇಂದು ಭಾರ್ತಿ ಏರ್ಟೆಲ್ ಅಧಿಕಾರಿಗಳು ದರ ಏರಿಕೆ ಘೋಷಣೆ ಮಾಡಿದ್ದು, ಭಾರತೀಯ ವಿವಿಧ ಯೋಜನೆಗಳಿಗೆ ಟೆಲಿಕಾಂ ಆಪರೇಟರ್ ತನ್ನ ಪ್ರೀಪೇಯ್ಡ್ ಯೋಜನೆಯ ಬೆಲೆಗಳನ್ನು ಹೆಚ್ಚಿಸಲಿದೆ ಎಂದು ತಿಳಿಸಿದೆ.ಹೊಸ ದರಗಳು ಕರೆ ಯೋಜನೆಗಳಿಗೆ ಶೇ. 20 ರಷ್ಟು ಹೆಚ್ಚಳ ಮಾಡಿದರೆ, ಅನಿಯಮಿತ ಕರೆ ಮತ್ತು ಡೇಟಾ ಯೋಜನೆ ಪ್ಯಾಕ್ ಗಳು ಮತ್ತು ಡೇಟಾ ಟಾಪ್ ಅಪ್ ರೀಚಾರ್ಜ್ ಗಳ ಮೇಲೆ ಶೇ. 25 ರಷ್ಟು ಹೆಚ್ಚಳ ಮಾಡಲಾಗಿದೆ.

ಭಾರ್ತಿ ಏರ್ ಟೆಲ್ ಯಾವಾಗಲೂ ಮೊಬೈಲ್ ಸರಾಸರಿ ಆದಾಯ ಪ್ರತಿ ಬಳಕೆದಾರನಿಗೆ ರೂ.200 ಮತ್ತು ಅಂತಿಮವಾಗಿ ರೂ.300 ಕ್ಕೆ ಇರಬೇಕು ಎಂದು ಸಮರ್ಥಿಸಿಕೊಂಡಿದೆ, ಇದರಿಂದ ಆರ್ಥಿಕವಾಗಿ ಆರೋಗ್ಯಕರ ವ್ಯಾಪಾರ ಮಾದರಿಗೆ ಅವಕಾಶ ನೀಡುವ ಬಂಡವಾಳದ ಮೇಲೆ ಸಮಂಜಸವಾದ ಆದಾಯವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ. ಇನ್ನೂ ಮುಖ್ಯವಾಗಿ, ಇದು ಭಾರತದಲ್ಲಿ 5G ತರಂಗಾಂತರ ಜಾರಿಗೆ ತರಲು ಏರ್‌ಟೆಲ್‌ಗೆ ಬೆಂಬಲ ನೀಡುತ್ತದೆ ಎಂದು ಏರ್ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದರ ಮೊದಲ ಹೆಜ್ಜೆಯಾಗಿ, ಕಂಪನಿಯು ನವೆಂಬರ್ ತಿಂಗಳಿನಲ್ಲಿ ದರಗಳನ್ನು ಮರು ಪರಿಷ್ಕರಿಸಿದ್ದು, ಆ ಮೂಲಕ ಶುಲ್ಕ ಪರಿಷ್ಕರಣೆ ಹಂತದಲ್ಲಿ ತಾನೇ ಮೊದಲ ಹೆಜ್ಜೆಯನ್ನಿಟ್ಟಿದೆ.ಯೋಜನೆಗಳಲ್ಲಿನ ಹೊಸ ಬದಲಾವಣೆಗಳು ನವೆಂಬರ್ 26, 2021 ರಿಂದ ಜಾರಿಗೆ ಬರಲಿದೆ.ಹೆಚ್ಚಳದ ಪ್ರಕಾರ, ರೂ.79 ಧ್ವನಿ ಯೋಜನೆಗೆ ಈಗ ರೂ.99 ವೆಚ್ಚವಾಗಲಿದೆ ಮತ್ತು ‘₹99, 200 ಎಂಬಿ ಡೇಟಾ, 1ಪಿ/ಸೆಕೆಂಡು ಧ್ವನಿ ಸುಂಕ’ ಮೌಲ್ಯದ ಶೇಕಡಾ 50 ರಷ್ಟು ಹೆಚ್ಚಿನ ಟಾಕ್ ಟೈಮ್ ಅನ್ನು ನೀಡುತ್ತದೆ ಎನ್ನಲಾಗಿದೆ.

You may also like

Leave a Comment