ಇ-ಕಾಮರ್ಸ್ ದೈತ್ಯ ಅಮೆಜಾನ್ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಲ್ಲೂ ವಿಶೇಷ ದಿನಕ್ಕೆ ಬಂಪರ್ ಆಫರ್ ನೀಡುವ ಮೂಲಕ ಮತ್ತಷ್ಟು ಗಮನಸೆಳೆಯುತ್ತಿದೆ. ಅದರಂತೆ ಇದೀಗ ಪ್ರೇಮಿಗಳ ದಿನದ ಹಿನ್ನೆಲೆ ಅಮೆಜಾನ್ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ.
ಇದೀಗ ಪ್ರೇಮಿಗಳ ದಿನದ ವಿಶೇಷತೆಯ ಅಂಗವಾಗಿ ಫ್ಯಾಬ್ ಫೋನ್ಸ್ ಫೆಸ್ಟ್ ಎಂದು ಕರೆಯಲ್ಪಡುವ ಅಮೆಜಾನ್‌ನ ಹೊಸ ಸೇಲ್ ನ್ನು ಪ್ರಾರಂಭಿಸಿದ್ದು, ಫೆಬ್ರವರಿ 14, 2023 ರ ವರೆಗೆ ಇರಲಿದೆ. ಇದರಲ್ಲಿ ವಿವಿಧ ರೀತಿಯ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡುತ್ತಿದ್ದು, ಗ್ರಾಹಕರಿಗೆ ಇಷ್ಟವಾಗುವ ಮೊಬೈಲ್ ಗಳನ್ನೇ ಆಫರ್ ಮೂಲಕ ನೀಡಲಾಗುತ್ತದೆ. ಹಾಗಿದ್ರೆ ಬನ್ನಿ ಯಾವೆಲ್ಲ ಮೊಬೈಲ್ ಫೋನ್ ಗಳು ಆಫರ್ ನಲ್ಲಿ ದೊರೆಯಲಿದೆ ಎಂಬುದನ್ನು ತಿಳಿಯೋಣ.
ಶಿಯೋಮಿ ಸ್ಮಾರ್ಟ್‌ಫೋನ್‌ಗಳು:
ಶಿಯೋಮಿ ಬ್ರ್ಯಾಂಡ್ ಕಂಪೆನಿಯ ರೆಡ್ಮಿ 10 ಪವರ್, ರೆಡ್ಮಿ 10A, ಮತ್ತು ರೆಡ್ಮಿ A1 ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 10,749 ರೂ., 7,862 ರೂ., ಹಾಗೂ 6,499 ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು:
ಪ್ರೇಮಿಗಳ ದಿನದಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಫೆಡರಲ್ ಬ್ಯಾಂಕ್‌ನ ಕೊಡುಗೆ ಮೂಲಕ ಗ್ಯಾಲಕ್ಸಿ M13, ಗ್ಯಾಲಕ್ಸಿ M33 ಮತ್ತು ಗ್ಯಾಲಕ್ಸಿM04 ಸ್ಮಾರ್ಟ್‌ಫೋನ್‌ಗಳನ್ನು 8,699 ರೂ., 13,999 ರೂ., ಮತ್ತು 7,499ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಐಕ್ಯೂ ಸ್ಮಾರ್ಟ್‌ಫೋನ್‌ಗಳು:
ಐಕ್ಯೂ ಇತ್ತೀಚೆಗೆ ವಿವಿಧ 5G ಫೋನ್‌ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ಐಕ್ಯೂ Z6 5G, ಐಕ್ಯೂ Z6 ಲೈಟ್ 5G, ಮತ್ತು ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್‌ಗಳನ್ನು ಕ್ರಮವಾಗಿ 14,499 ರೂ., 11,999 ರೂ. ಹಾಗೂ 24,990 ರೂ. ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಟೆಕ್ನೋ ಸ್ಮಾರ್ಟ್‌ಫೋನ್‌ಗಳು:
ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಟೆಕ್ನೋ ಫೋನ್‌ಗಳಿಗೆ ಇಂದು ಭರ್ಜರಿ ಬೇಡಿಕೆಯೇ ಇದೆ. ಈ ಫೋನ್‌ಗಳಲ್ಲಿ ಅತ್ಯುತ್ತಮ ಎನಿಸಿಕೊಂಡಿರುವ ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್ 4GB RAM ಹಾಗೂ 64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ 13MP ಕ್ಯಾಮೆರಾ ಮತ್ತು AI ಮೋಡ್ ಆಯ್ಕೆ ಪಡೆದುಕೊಂಡಿದೆ. ಅದರಂತೆ ಟೆಕ್ನೋ ಪಾಪ್ 6 ಪ್ರೊ ಸ್ಮಾರ್ಟ್‌ಫೋನ್ ಸಹ ಹೆಚ್ಚಿನ ಆಫರ್‌ನಲ್ಲಿ ಲಭ್ಯವಿದ್ದು, ಈ ಫೋನ್ ನಿಮಗೆ 5,399 ರೂ. ಗಳ ಬೆಲೆಯಲ್ಲಿ ಲಭ್ಯವಿದೆ ಮತ್ತು ಟೆಕ್ನೋ ಸ್ಪಾರ್ಕ್ 9 ಫೋನ್ ಅನ್ನು 7,019 ರೂ. ಗಳ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ.
ರಿಯಲ್‌ಮಿ ಸ್ಮಾರ್ಟ್‌ಫೋನ್:
ಅಗ್ಗದ ದರದಲ್ಲಿ ಹೆಚ್ಚಿನ ಫೀಚರ್ಸ್ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳು ರಿಯಲ್‌ಮಿ ಬ್ರ್ಯಾಂಡ್‌ನಲ್ಲಿ ಲಭ್ಯವಿದ್ದು, ರಿಯಲ್‌ಮಿ 50i ಪ್ರೈಮ್ ಮತ್ತು ರಿಯಲ್‌ಮಿ 50A ಪ್ರೈಮ್ ಸ್ಮಾರ್ಟ್‌ಫೋನ್ ಕ್ರಮವಾಗಿ 6,299 ರೂ., ಹಾಗೂ 8,999 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ರಿಯಲ್‌ಮಿ 50 5G ಸ್ಮಾರ್ಟ್‌ಫೋನ್ ಅನ್ನು 12,999 ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಒಪ್ಪೋ ಸ್ಮಾರ್ಟ್‌ಫೋನ್‌ಗಳು:
ಒಪ್ಪೋ ಬ್ರ್ಯಾಂಡ್ ವಿಭಾಗದಲ್ಲಿ ಒಪ್ಪೋ A78 ಸ್ಮಾರ್ಟ್‌ಫೋನ್ ಆಕರ್ಷಕವಾಗಿದ್ದು, ಈ ಫೋನ್ ವೇಗದ ಚಾರ್ಜಿಂಗ್ ಆಯ್ಕೆ ಹಾಗೂ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬ್ಯಾಂಕ್ ರಿಯಾಯಿತಿಗಳು ಮತ್ತು ಇತರೆ ಆಫರ್‌ನಲ್ಲಿ ಈ ಫೋನ್ ಅನ್ನು 17,100 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಗ್ರಾಹಕರು ಎಸ್‌ಬಿಐ ಮ್ಯಾಕ್ಸ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಮ್‌ಇ ವಹಿವಾಟುಗಳ ಮೂಲಕ 1,000 ರೂ.ಗಳವರೆಗೆ ಮತ್ತು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವಹಿವಾಟುಗಳ ಮೇಲೆ 1,250 ರೂ. ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ.
