Child Death: ಮಕ್ಕಳಿಲ್ಲ ಎಂದು ಕೊರಗಿದ ದಂಪತಿಗಳಿಗೆ ಒಂಭತ್ತು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದು ಜನಿಸಿದೆ. ಏಳು ವರ್ಷಗಳಿಂದ ಹಪಹಪಿಸುತ್ತಿದ್ದ ಕಂದಮ್ಮನಿಗಾಗಿ ದೇವರು ವರ ನೀಡಿದ್ದ. ತಮ್ಮ ಕಷ್ಟ ಮಾಯವಾಗಿ ಇನ್ನು ಮಗುವಿನೊಂದಿಗೆ ಜೀವನ ನಡೆಸಬೇಕು ಎಂದು ಹೇಳಿಕೊಳ್ಳುವಷ್ಟರಲ್ಲಿಯೇ ದುರಂತ ಘಟನೆಯೇ ನಡೆದಿದೆ. ನಿಂಬೆಹಣ್ಣನ್ನು ನುಂಗಿದ ಆ ಕಂದ ಸಾವಿಗೀಡಾಗಿದೆ. ಆ ಪುಟ್ಟ ಹಸುಗೂಸು ಆಟವಾಡುತ್ತಾ ನಿಂಬೆಹಣ್ಣನನ್ನು ತಿಂದಿದ್ದು, ಇದೀಗ ಮೃತ ಹೊಂದಿದೆ. ಈ ದುರದೃಷ್ಟಕರ ಘಟನೆ ನಡೆದಿದ್ದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲದ ಮಲ್ಲೇನಿಪಲ್ಲಿ ಗ್ರಾಮದಲ್ಲಿ.
ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯ ಸಾಕಿದೀಪ ಮತ್ತು ಗೋವಿಂದರಾಜ್ ಅವರ ಹೆಣ್ಣು ಮಗು ಜಸ್ವಿತಾ (9 ತಿಂಗಳು). ಮನೆಯ ಜಗುಳಿಯಲ್ಲಿ ಆಟವಾಡುತ್ತಿದ್ದ ಮಗು ಜಗುಲಿಯ ಮೇಲೆ ಬಿದ್ದ ನಿಂಬೆಹಣ್ಣನ್ನು ಬಾಯಿಗೆ ಹಾಕಿಕೊಂಡಿದೆ. ಇದನ್ನು ಗಮನಿಸಿದ ತಾಯಿ ಕೂಡಲೇ ಅದನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಮಗು ಅದಾಗಲೇ ನುಂಗಿದ್ದರಿಂದ ಲಿಂಬೆ ಹಣ್ಣು ಗಂಟಲಲ್ಲಿ ಸಿಕ್ಕಿಕೊಂಡಿದ್ದು, ಉಸಿರಾಟದ ತೊಂದರೆ ಉಂಟಾಗಿದೆ.
ಸಾಕಿದೀಪ ಮತ್ತು ಗೋವಿಂದರಾಜ್ ಅವರ ಹೆಣ್ಣು ಮಗು ಜಸ್ವಿತಾ (9 ತಿಂಗಳು). ಮನೆಯ ಜಗುಳಿಯಲ್ಲಿ ಆಟವಾಡುತ್ತಿದ್ದು ಜಗುಲಿಯ ಮೇಲೆ ಬಿದ್ದ ನಿಂಬೆಹಣ್ಣನ್ನು ಬಾಯಿಗೆ ಹಾಕಿಕೊಂಡಿದೆ. ಇದನ್ನು ಗಮನಿಸಿದ ತಾಯಿ ಕೂಡಲೇ ಅದನ್ನು ಹೊರತೆಗೆಯಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಗು ಅದಾಗಲೇ ನುಂಗಿದೆ. ಲಿಂಬೆ ಹಣ್ಣು ಗಂಟಲಲ್ಲಿ ಸಿಕ್ಕಾಕಿಕೊಂಡಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದರೆ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತ ಹೊಂದಿರುವುದಾಗಿ ಹೇಳಿದ್ದಾರೆ. ತಮ್ಮ ಮಗುವಿನ ಸಾವಿನ ಸುದ್ದಿ ದಂಪತಿಗಳಿಗೆ ಆಘಾತವನ್ನೇ ಉಂಟು ಮಾಡಿದೆ.
