Home » ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಪಘಾತದ ಗಾಯಾಳುವಿಗೆ ನೆರವು

ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಪಘಾತದ ಗಾಯಾಳುವಿಗೆ ನೆರವು

by Praveen Chennavara
0 comments

ಬೆಳ್ತಂಗಡಿ : ಕೆಲದಿನಗಳ ಹಿಂದೆ ಉಜಿರೆ ಪೇಟೆಯಲ್ಲಿ ಅಪಘಾತದಿಂದ ಗಾಯಗೊಂಡಿದ್ದ ಬೆಳ್ತಂಗಡಿ ತಾಲೂಕಿನ ಬಂಗಾಡಿ ಗ್ರಾಮದ ದೇರಜೆ ಮನೆಯ ಕೃಷ್ಣಪ್ಪ ಗೌಡರ ಪುತ್ರ ಪ್ರವೀಣ್ ಗೌಡ ಅವರಿಗೆ ಶ್ರೀಕ್ಷೇತ್ರ ಆರಿಕೋಡಿಯಿಂದ ನೆರವು ನೀಡಲಾಯಿತು.

ಅಪಘಾತದಿಂದ ಗಾಯಗೊಂಡಿದ್ದ ಪ್ರವೀಣ್ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಕ್ಷೇತ್ರದ ವತಿಯಿಂದ ಹತ್ತು ಸಾವಿರ ರೂಪಾಯಿಯ ಚೆಕ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.

You may also like

Leave a Comment