Home » Aryavadhan: ರೊಚ್ಚಿಗೆದ್ದ ಕಿಚ್ಚ ಸುದೀಪ್ ಫ್ಯಾನ್ಸ್ – ಸಾರಿ.. ಸಾರಿ ದಯವಿಟ್ಟು ಕ್ಷಮಿಸಿ ಎಂದ ಆರ್ಯವರ್ಧನ್ ಗುರೂಜಿ!!

Aryavadhan: ರೊಚ್ಚಿಗೆದ್ದ ಕಿಚ್ಚ ಸುದೀಪ್ ಫ್ಯಾನ್ಸ್ – ಸಾರಿ.. ಸಾರಿ ದಯವಿಟ್ಟು ಕ್ಷಮಿಸಿ ಎಂದ ಆರ್ಯವರ್ಧನ್ ಗುರೂಜಿ!!

0 comments

Aryavardhan: ಎಲುಬಿಲ್ಲದ ನಾಲಿಗೆ ಒಮ್ಮೊಮ್ಮೆ ಏನೇನೋ ಮಾತನಾಡಿಸಿಬಿಡುತ್ತದೆ.  ಅಂತಯೇ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಬಿಗ್ ಬಾಸ್ ಖ್ಯಾತಿಯ, ಸ್ವಯಂಘೋಷಿತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ ಗುರೂಜಿಯವರು ಕಿಚ್ಚ ಸುದೀಪ್ ಅವರ ಕುರಿತಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಅಸಹ್ಯಕರ ಹೇಳಿಕೆಯನ್ನು ನೀಡಿದ್ದರು. ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದು ಆರ್ಯವರ್ಧನ್ ಗುರೂಜಿ ಬಾಯಲ್ಲಿ ಕ್ಷಮೆ ಕೇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ‘ದರ್ಶನ್ ಹೋದ್ಮೇಲೆ ಸುದೀಪ್ ಎಗರಾಡುತ್ತಿದ್ದಾರೆ. ಪ್ಯಾಂಟ್ ಬಿಚ್ಚಿ ತೋರಿಸಲ ಎಂದೆಲ್ಲಾ ಹೇಳಿದ್ದರು’ ಎಂದು ಹೇಳಿದ್ದ ಆರ್ಯವರ್ಧನ್‌ ಇದೀಗ ಕಿಚ್ಚ ಸುದೀಪ್‌ಗೆ (Kichcha Sudeepa) ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಈ ಕುರಿತಾಗಿ ವಿಡಿಯೋದಲ್ಲಿ ಅವರು ಮಾತನಾಡಿರುವ ವಿಚಾರ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

‘ಸುದೀಪ್ ಅವರಿಗೆ ನಮಸ್ಕಾರ. ಅವರ ಜೊತೆ ಕೆಲಸ ಮಾಡಿದ್ದೇನೆ. ಹೊಸ ವರ್ಷ ಅವರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆದು ಮಾಡಲಿ’ ಎಂದು ಮಾತು ಆರಂಭಿಸಿದ್ದಾರೆ. ‘ಮಾತನಾಡುವ ಭರದಲ್ಲಿ ಏನೋ ಹೇಳಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಅವರ ಮೇಲೆ ಅಪಾರ ಪ್ರೀತಿ ಹಾಗೂ ನಂಬಿಕೆ ಇದೆ. ಸಾರಿ ಸಾರಿ ಸಾರಿ.. ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. ಅವರ ಅಭಿಮಾನಿಗಳಿಗೂ ಒಳ್ಳೆಯದಾಗಲಿ’ ಎಂದು ಆರ್ಯವರ್ಧನ್ ಕ್ಷಮೆ ಕೇಳಿ ವಿಡಿಯೋ ಮಾಡಿದ್ದಾರೆ.

You may also like