Home » ನಿಶ್ಚಿತಾರ್ಥ ಮಾಡಿಕೊಂಡ ಹುಡುಗನನ್ನೇ ವಂಚನೆ ಆರೋಪದಲ್ಲಿ ಬಂಧಿಸಿದ್ದ ಲೇಡಿ ಸಿಂಗಂ, ಭ್ರಷ್ಟಾಚಾರ ಆರೋಪದಲ್ಲಿ ಅರೆಸ್ಟ್ !!!!

ನಿಶ್ಚಿತಾರ್ಥ ಮಾಡಿಕೊಂಡ ಹುಡುಗನನ್ನೇ ವಂಚನೆ ಆರೋಪದಲ್ಲಿ ಬಂಧಿಸಿದ್ದ ಲೇಡಿ ಸಿಂಗಂ, ಭ್ರಷ್ಟಾಚಾರ ಆರೋಪದಲ್ಲಿ ಅರೆಸ್ಟ್ !!!!

by Mallika
0 comments

ವಂಚನೆ ಕೇಸ್‌ನಲ್ಲಿ ಪ್ರಿಯಕರನನ್ನೇ ಬಂಧಿಸಿ ಭಾರೀ ಫೇಮಸ್ ಗಳಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ನೋನಿ ರಾಭಾ ಅರೆಸ್ಟ್ ಆಗಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಎಂಎಸ್ ರಾಭಾ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ.

ಮಜುಲಿ ಜಿಲ್ಲೆಯ ನ್ಯಾಯಾಲಯ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಬ್ಬರು ಗುತ್ತಿಗೆದಾರರಿಂದ ಹಣ ಪಡೆದಿರುವ ಆರೋಪ ಕೇಳಿಬಂದಿತ್ತು. ಇದಕ್ಕೂ ಮೊದಲು ಒಎನ್‌ಜಿಸಿಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ಕೆಲಸ ನೀಡುವ ಭರವಸೆ ನೀಡಿ ಕೆಲವರಿಗೆ ಪೊಲೀಸ್ ಅಧಿಕಾರಿಯ ಪ್ರಿಯಕರ ವಂಚಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ಖುದ್ದು ಅಧಿಕಾರಿಯೇ ಹೋಗಿ ಪ್ರಿಯಕರನ ಅರೆಸ್ಟ್ ಮಾಡಿದ್ರು. ಈ ಘಟನೆ ಬಳಿಕ ಅವರನ್ನು ಲೇಡಿ ಸಿಂಗಂ ಅಂತಲೇ ಕರೆಯಲಾಗಿತ್ತು. ಆದರೆ ಇದೀಗ ಅವರೇ ಬಂಧನವಾಗಿದ್ದಾರೆ.

You may also like

Leave a Comment