Home » Ayodhya: ಅಯೋಧ್ಯೆ ರಾಮಮಂದಿರ ಉದ್ಘಾಟನೆ: 7 ಸಾವಿರ ಗಣ್ಯರು, 506 ಮಂದಿ A ಲಿಸ್ಟ್ ನಲ್ಲಿ!

Ayodhya: ಅಯೋಧ್ಯೆ ರಾಮಮಂದಿರ ಉದ್ಘಾಟನೆ: 7 ಸಾವಿರ ಗಣ್ಯರು, 506 ಮಂದಿ A ಲಿಸ್ಟ್ ನಲ್ಲಿ!

1 comment
Ayodhya

Ayodhya: ಶತಮಾನಗಳ ಹಿಂದೂ ಜನರ ಬೇಡಿಕೆಯಾದ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಾರಂಭ ನಡೆಯುತ್ತಿದೆ.

ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ 7000 ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಬಹುತೇಕ ಗಣ್ಯರು ಅಯೋಧ್ಯೆ ತಲುಪಿದ್ದಾರೆ. ಅಂತೆಯೇ ಆಯ್ದ ಪಟ್ಟಿಯಲ್ಲಿ 506 ಎ-ಲಿಸ್ಟರ್‌ ಗಣ್ಯರೂ ಇದ್ದು, ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌, ಮುಖೇಶ್‌ ಅಂಬಾನಿ, ಗೌತಮ್‌ ಅದಾನಿ, ಸಚಿನ್‌ ತೆಂಡೂಲ್ಕರ್‌ ಈ ಆಹ್ವಾನದಲ್ಲಿದ್ದಾರೆ. ಇಡೀ ಕಾರ್ಯಕ್ರಮಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಉದಯೋನ್ಮುಖ ಫುಟ್ಬಾಲ್ ಆಟಗಾರ ಮೃತ್ಯು; ಸಿಎಂ ಸಿದ್ದರಾಮಯ್ಯ ಸಂತಾಪ!!

2019 ರಲ್ಲಿ ಸುಪ್ರೀಂ ಕೋರ್ಟ್‌ ರಾಮಜನ್ಮಭೂಮಿ-ಬಾಬರಿ ಮಸೀದಿ ಶೀರ್ಷಿಕೆ ಮೊಕದ್ದಮೆಯಲ್ಲಿ ಈ ದೇವಾಲಯದ ಶಂಕುಸ್ಥಾಪನೆ ಆಗಿದೆ. ರಾಮನ ಜನ್ಮಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ದಾವೆದಾರರು ವಾದ ಮಾಡಿದ್ದರು. 1992 ರಲ್ಲಿ 16 ನೇ ಶತಮಾನದ ಮಸೀದಿಯನ್ನು ಕೆಡವಲಾಗಿತ್ತು. ಇದೀಗ ಸುಪ್ರೀಂಕೋರ್ಟ್‌ನ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ.

You may also like

Leave a Comment