Home » ಕಸಾಯಿಖಾನೆಗೆ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ತಡೆದ ಬಜರಂಗದಳ ಕಾರ್ಯಕರ್ತರು !ಚಾಲಕ ಅರೆಸ್ಟ್

ಕಸಾಯಿಖಾನೆಗೆ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ತಡೆದ ಬಜರಂಗದಳ ಕಾರ್ಯಕರ್ತರು !ಚಾಲಕ ಅರೆಸ್ಟ್

by Mallika
0 comments

ಇಂದು ಬೆಳಗ್ಗೆ ಬಜರಂಗದಳ ಕಾರ್ಯಕರ್ತರು ಕಂಬಳಪದವು ಎಂಬಲ್ಲಿ ಎರಡು ಕೋಣಗಳನ್ನು
ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ವಾಹನವನ್ನ ತಡೆದು ಆರೋಪಿ ಚಾಲಕ ಮತ್ತು ಜಾನುವಾರುಗಳನ್ನ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪಿಕ್ ಅಪ್ ಚಾಲಕ ಬಾಳೆಪುಣಿ ನಿವಾಸಿ ಮಹಮ್ಮದ್ ಹನೀಫ್ ನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹನೀಫ್ ಮೂಡಬಿದ್ರೆಯಿಂದ ಬಿ.ಸಿ. ರೋಡ್ ಮೆಲ್ಕಾರ್ ಮಾರ್ಗವಾಗಿ ಕೋಟೆಕಾರು ಕೊಂಡಾಣಕ್ಕೆ ಅಕ್ರಮವಾಗಿ ಎರಡು ಕೋಣಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಮುಡಿಪು ಕಂಬಳಪದವು ಎಂಬಲ್ಲಿ ತಡೆದಿದ್ದಾರೆ.

ಎರಡು ಕೋಣಗಳನ್ನ ವಶಕ್ಕೆ ಪಡೆದ ಕೊಣಾಜೆ ಪೊಲೀಸರು ಆರೋಪಿ ಮಹಮ್ಮದ್ ಹನೀಫ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment