Home » ಬೆಂಗಳೂರಲ್ಲಿ ಮೈಸೂರು ಸಿಲ್ಕ್‌ ಸೀರೆಗೆ ಭರ್ಜರಿ ಡಿಸ್ಕೌಂಟ್‌ : ಸೀರೆಗೆ ಕೈ ಹಾಕೋ ಬದ್ಲು ಮಹಿಳೆಯರಿಬ್ಬರ ಜಡೆ ಕಿತ್ತಾಟ

ಬೆಂಗಳೂರಲ್ಲಿ ಮೈಸೂರು ಸಿಲ್ಕ್‌ ಸೀರೆಗೆ ಭರ್ಜರಿ ಡಿಸ್ಕೌಂಟ್‌ : ಸೀರೆಗೆ ಕೈ ಹಾಕೋ ಬದ್ಲು ಮಹಿಳೆಯರಿಬ್ಬರ ಜಡೆ ಕಿತ್ತಾಟ

0 comments
Bangalore News

Bangalore News: ಸೀರೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹೆಂಗಳೆಯರಂದು ಮುಗಿಬೀಳೋದ್ರಲ್ಲಿ ಕಮ್ಮಿಯೇನಿಲ್ಲ. ಇದೀಗ ಬೆಂಗಳೂರಿನಲ್ಲಿ ಮೈಸೂರು ಸಿಲ್ಕ್‌ ಸೀರೆಗೆ ಭರ್ಜರಿ ಡಿಸ್ಕೌಂಟ್‌ ಹಾಕಿದ್ದ ಮಳಿಗೆಯಲ್ಲೇ ಮಹಿಳೆಯರಿಬ್ಬರು ಜಡೆ ಎಳೆದಾಡಿ ಕಿತ್ತಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ(Bangalore News) ಏ. 19ರಿಂದ ಮಲ್ಲೇಶ್ವರದ 8ನೇ ಕ್ರಾಸ್‌ನಲ್ಲಿರುವ ಕೆನರಾ ಯೂನಿಯನ್‌ ಹಾಲ್‌ನಲ್ಲಿ ಕರ್ನಾಟಕ ಸಿಲ್ಕ್‌ ಎಂಪೋರಿಯಮ್‌ (ಕೆ.ಎಸ್.ಐ.ಸಿ) ತನ್ನ ಎರಡನೇ ಡಿಸ್ಕೌಂಟ್‌ ಸೇಲ್‌ ಹಾಕಲಾಗಿತ್ತು ಇಂದು ಕೊನೆ ದಿನವಾಗಿದೆ. ಹಾಗಾಗಿ ಸೀರೆಗಾಗಿ  ಸಿಲ್ಕ್‌ ಸೀರೆಗಳ ಮೇಲೆ ಶೇ. 35ರಷ್ಟು ಡಿಸ್ಕೌಂಟ್‌ ಹಾಕಿದ ಹಿನ್ನೆಲೆಯಲ್ಲಿ ಮಹಿಳೆಯರು ಎಲ್ಲರೂ ಕಡೇ ದಿನದ ಸೇಲ್‌ಗಾಗಿ ಮುಗಿಬಿದ್ದಿದ್ದರು. ಆಯ್ಕೆ ಮಾಡುವ ವಿಚಾರಕ್ಕೆ ಗಲಾಟೆ ತೀವ್ರಗೊಂಡು ಪರಸ್ಪರ ಜಡೆಗಳನ್ನು ಹಿಡಿದು ಕಿತ್ತಾಡಿದ್ದಾರೆ ಎಂದು ತಿಳಿಯಲಾಗಿದೆ

You may also like

Leave a Comment