2
Bangalore News: ಬೆಂಗಳೂರಿನಲ್ಲಿ(Bangalore News) ಪ್ರಧಾನಿ ಮೋದಿಯವರಿಂದ(PM Narendra Modi) ನಡೆಯಬೇಕಾಗಿದ್ದ ರೋಡ್ ಶೋ ಮತ್ತೆ ಬದಲಾವಣೆಯಾಗಿದೆ. ನೀಟ್ ಎಕ್ಸಾಂ (NEET Exam) ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ರಾಜ್ಯದ ಬಿಜೆಪಿ ನಾಯಕರುಗಳು ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದ ಮೇರೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಹಾಗಾಗಿ ಬದಲಾವಣೆ ಸಮಯದ ಪ್ರಕಾರ, ಭಾನುವಾರ ಬೆಳಗ್ಗೆ ನಡೆಯಬೇಕಾಗಿದ್ದ ರೋಡ್ ಶೋ ಶನಿವಾರಕ್ಕೆ ನಿಗದಿಪಡಿಸಲಾಗಿದೆ. ಶನಿವಾರ ಬೆಳಗ್ಗೆ ನಿಗದಿ ಪಡಿಸಿದ್ದ ರೋಡ್ ಶೋ ಭಾನುವಾರ ನಡೆಯಲಿದೆ. ಶನಿವಾರ 10 ಕಿಮೀ ರೋಡ್ ಶೋ ಭಾನುವಾರದಂದು ಬೆಳಗ್ಗೆ ನಡೆಯಲಿದೆ. ಹಾಗೆಯೇ ಭಾನುವಾರ ನಡೆಯಬೇಕಿದ್ದ 26.5 ಕಿ.ಮೀ. ರೋಡ್ ಶನಿವಾರ ನಡೆಯಲಿದೆ.
