Home » Bank: ಬ್ಯಾಂಕ್ ಗಳಲ್ಲಿ ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ- ಐಬಿಎ ಒಪ್ಪಿಗೆ

Bank: ಬ್ಯಾಂಕ್ ಗಳಲ್ಲಿ ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ- ಐಬಿಎ ಒಪ್ಪಿಗೆ

0 comments

Bank : ಬ್ಯಾಂಕ್(bank) ಉದ್ಯೋಗಿಗಳಿಗೆ ಸಿಹಿಸುದ್ಧಿ ಇಲ್ಲಿದೆ. ಉದ್ಯೋಗಿಗಳ ಬೇಡಿಕೆಗೆ ಕೊನೆಗೂ ಫಲ ಸಿಕ್ಕಿದೆ. ಹೌದು, ಬ್ಯಾಂಕ್ ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ ಹಾಗೂ ಉಳಿದ 2 ದಿನ ರಜೆ ನೀಡಬೇಕು ಎಂಬ ಬೇಡಿಕೆಗೆ ಐಬಿಎ(IBA) ಒಪ್ಪಿಗೆ ನೀಡಿದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಿ, ಉಳಿದ ಎರಡು ದಿನ ರಜೆ ನೀಡಬೇಕು ಎಂಬ ಉದ್ಯೋಗಿಗಳ ಬೇಡಿಕೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್(ಐಬಿಎ) ತಾತ್ವಿಕ ಒಪ್ಪಿಗೆ ನೀಡಿದೆ. ಇನ್ನು ಇದಕ್ಕೆ ಕೇಂದ್ರ ಸರ್ಕಾರ ಕೂಡ ಒಪ್ಪಿಗೆ ನೀಡಿದರೆ, ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಬ್ಯಾಂಕ್ ಉದ್ಯೋಗಿಗಳ ಸಂಘಟನೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯಿಸ್, ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಐದು ದಿನ ಕೆಲಸ, ಇನ್ನುಳಿದ ಎರಡು ದಿನ ರಜೆ ನೀಡಬೇಕೆಂಬ ಪ್ರಸ್ತಾಪವೆತ್ತಿದೆ. ಈ ಬೇಡಿಕೆಗೆ ಭಾರತೀಯ ಬ್ಯಾಂಕ್ ಅಸೋಸಿಯೇಷನ್(Indian Banks association) ಒಪ್ಪಿಗೆ ನೀಡಿದೆ.

ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ (Negotiable Instruments Act) 25ನೇ ವಿಧಿಯ ಪ್ರಕಾರ, ಈ ನಿಯಮವನ್ನು ಸರ್ಕಾರ ಜಾರಿಗೊಳಿಸಬೇಕಿದೆ. ಬ್ಯಾಂಕ್ ಉದ್ಯೋಗಿಗಳಿಗೆ ನಾಲ್ಕು ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ರಜೆ ಇದೆ. ಇದರ ಬದಲಾಗಿ ಕೆಲಸದ ಅವಧಿಯನ್ನು 50 ನಿಮಿಷ ಹೆಚ್ಚಳ ಮಾಡಿ, ವಾರಕ್ಕೆ ಐದು ದಿನ ಕೆಲಸ, ಇನ್ನುಳಿದ ಎರಡು ದಿನವಾದ ಶನಿವಾರ(Saturday) ಮತ್ತು ಭಾನುವಾರ(Sunday) ರಜೆ ನೀಡಲಾಗುವುದು ಎಂದು ಹೇಳಲಾಗಿದೆ.

You may also like

Leave a Comment