Home » Bantwal Dowry Case: ಪತ್ನಿಗೆ ಹಣಕ್ಕಾಗಿ ಚಿತ್ರಹಿಂಸೆ; ಆರೋಪಿ ಉಮ್ಮರ್ ಫಾರೂಕ್ ಸೇರಿ 7 ಮಂದಿ ವಿರುದ್ದ ಕೇಸು ದಾಖಲು!!

Bantwal Dowry Case: ಪತ್ನಿಗೆ ಹಣಕ್ಕಾಗಿ ಚಿತ್ರಹಿಂಸೆ; ಆರೋಪಿ ಉಮ್ಮರ್ ಫಾರೂಕ್ ಸೇರಿ 7 ಮಂದಿ ವಿರುದ್ದ ಕೇಸು ದಾಖಲು!!

0 comments

Bantwal Dowry Case: ಬಂಟ್ವಾಳ (Bantwal)ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ದಲ್ಲಿ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ (Bantwal Dowry Case)ನಡೆಸಿರುವ ಘಟನೆ ವರದಿಯಾಗಿದೆ.

 

ಮಹಿಳೆ ಫಾತಿಮಾರವರು ಉಮ್ಮರ್ ಫಾರೂಕ್‌ರನ್ನು ಮದುವೆಯಾದ ಸಂದರ್ಭದಲ್ಲಿ 5 ಲಕ್ಷ ರೂ. ಹಾಗೂ 63 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು ಎನ್ನಲಾಗಿದೆ. ಮದುವೆಯ ನಂತರ ಆರೋಪಿಯು ತವರು ಮನೆಯಿಂದ ಹೆಚ್ಚಿನ ಹಣವನ್ನು ತಂದು ಕೊಡುವಂತೆ ಪ್ರತಿದಿನ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

 

ಇದರ ಜೊತೆಗೆ ಆರೋಪಿ ಉಮ್ಮ‌ರ್ ಫಾರೂಕ್ ಅಮಲು ಪದಾರ್ಥ ಸೇವಿಸಿ ಪತ್ನಿ ಫಾತಿಮಾಳಿಗೆ ತಲೆಗೆ, ಎದೆಗೆ ಹೊಡೆದು, ಇಸ್ತ್ರಿ ಪೆಟ್ಟಿಗೆಯಲ್ಲಿ ಮೈಯನ್ನು ಸುಟ್ಟಿದ್ದಾನೆ ಎನ್ನಲಾಗಿದೆ. ಈ ನಡುವೆ, ಉಮ್ಮರ್ ಫಾರೂಕ್ ಸಹೋದರರಾದ ಮುಸ್ತಫಾ, ರಿಯಾಜ್ ಫಾತಿಮಾಳಿಗೆ ಹಣಕೊಡುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಫಾತಿಮಾ ಆರೋಪಿಸಿದ್ದಾರೆ ಎನ್ನಲಾಗಿದೆ.ಇವರ ಜೊತೆಗೆ ಗಂಡನ ಅಣ್ಣ ಮೊಹಮ್ಮದ್ ಗಂಡ ಮನೆಯಲ್ಲಿಲ್ಲದ ಸಂದರ್ಭ ರೂಮಿಗೆ ಪ್ರವೇಶಿಸಿ ಅಸಭ್ಯವಾಗಿ ನಡೆಸುತ್ತಿದ್ದರು. ಈ ವಿಚಾರವನ್ನು ಫಾತಿಮಾ ತನ್ನ ತಂದೆಯ ಬಳಿ ತಿಳಿಸಿದ್ದು, ಹೀಗಾಗಿ ತಂದೆ ಪತಿಯ ಕಡೆಯವರಿಗೆ ನಂದಾವರದಲ್ಲಿ ಫ್ಲಾಟ್ ನೀಡಿರುತ್ತಾರೆ. ಆದಾಗ್ಯೂ, ಆರೋಪಿಗಳಾದ ಉಮ್ಮರ್ ಫಾರೂಕ್ ಹಾಗೂ ಮನೆಯವರು ಬಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ ಎಂದು ಫಾತಿಮಾ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

 

ಇತ್ತೀಚಿಗೆ, ಆರೋಪಿ ಉಮ್ಮರ್ ಫಾರೂಕ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೂರು ಬಾರಿ ತಲಾಕ್ ಹೇಳಿ ರಕ್ತ ಬರುವಂತೆ ಹೊಡೆದು, ಬೇರೆ ಮದುವೆಯಾಗುವ ಬೆದರಿಕೆಯೊಡ್ಡಿ 33 ಪವನ್ ಚಿನ್ನವನ್ನು ತೆಗೆದುಕೊಂಡು ಹೋಗಿರುವ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ ಎನ್ನಲಾಗಿದೆ. ಸದ್ಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment