Home » Good News : ನಿವೇಶನ ರಹಿತರಿಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ಸಹಾಯಹಸ್ತ!!!

Good News : ನಿವೇಶನ ರಹಿತರಿಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ಸಹಾಯಹಸ್ತ!!!

by Mallika
0 comments

ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಬಡಜನತೆಗೆ ಸಿಹಿಸುದ್ದಿಯನ್ನು ನೀಡಿದೆ. ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ 5 ಲಕ್ಷ ರೂ. ಸಹಾಯಧನ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಬಿಡಿಎ ಕೊಳಗೇರಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ ಅಪಾರ್ಟ್ ಮೆಂಟ್ ಖರೀದಿಗೆ ಬಡವರಿಗೆ 5 ಲಕ್ಷ ರೂ. ನೆರವು ನೀಡುವ ಪ್ರಸ್ತಾವನೆಗೆ ಮುಖ್ಯ ಆಯುಕ್ತರು ಒಪ್ಪಿಗೆ ನೀಡಿದ್ದು, ಆಡಳಿತಾಧಿಕಾರಿಗಳ ಸಮ್ಮತಿ ಬಾಕಿ ಇದೆ ಎಂದು ಬೆಂಗಳೂರು ಅಮೃತೋತ್ಸವ ಮನೆ ಯೋಜನೆಯಡಿ ಬಿಹೆಚ್ ಕೆ ಫ್ಲ್ಯಾಟ್ ಖರೀದಿಸುವ ಕುರಿತ ಮಾಹಿತಿಯನ್ನು ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಡಾ.ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ.

ನಗರದಲ್ಲಿ 20*30 ಅಥವಾ ಕಡಿಮೆ ಅಳತೆಯ ಸ್ವಂತ ನಿವೇಶ ಹೊಂದಿದ ಆರ್ಥಿಕ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಈ ಯೋಜನೆಯಿಂದ ಮನೆ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಆದರೆ ನಿವೇಶನ ಖರೀದಿಸಲು ಆಗದ ಬಡವರು ಸ್ವಂತ ಮನೆಕಟ್ಟಲು ಆಗುತ್ತಿಲ್ಲ. ಹೀಗಾಗಿ ಒಂಟಿ ಮನೆ ಯೋಜನೆಯಡಿ ನೀಡುವ ಸ್ವಲ್ಪ ಅನುದಾನವನ್ನು ಸರ್ಕಾರದ ವಿವಿಧ ಯೋಜನೆಗಳಡಿ ನಿರ್ಮಿಸಲಾದ ಮನೆಗಳ ಖರೀದಿಗೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.

You may also like

Leave a Comment