Home » Belagavi assualt case: ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ!!

Belagavi assualt case: ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ!!

1 comment
Belagavi assualt case

Belagavi Assault Case: ಬೆಳಗಾವಿಯಲ್ಲಿ ವಂಟಮೂರಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಳಗಾವಿ (Belagavi) ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ(Assault Case) ನಡೆಸಿರುವ ಘಟನೆ ವರದಿಯಾಗಿದೆ.

Belagavi assualt case

ಜನವರಿ 1ರಂದು ಮಕ್ಕಳು ಆಡವಾಡುತ್ತಾ ಅಂಗನವಾಡಿ ಪಕ್ಕದ ಮನೆಯಂಗಳದಲ್ಲಿರುವ‌ ಮಲ್ಲಿಗೆ ಹೂ ಕಿತ್ತಿದ್ದರಂತೆ. ಮಕ್ಕಳು ಮಾಡಿದ ತಪ್ಪಿಗೆ ಸಹಾಯಕಿಗೆ ಆರೋಪಿ ಕಲ್ಯಾಣಿ ಮೋರೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಗೊಳಗಾದ 50 ವರ್ಷದ ಅಂಗನವಾಡಿ ಸಹಾಯಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ: Rain Alert: ಒಂದು ವಾರದವರೆಗೆ ರಾಜ್ಯದ ಈ ಭಾಗಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!!

ಅಂಗನವಾಡಿ ಮಕ್ಕಳು ಪಕ್ಕದ ಮನೆಯಲ್ಲಿ ಹೂವು ಕಿತ್ತಿದ್ದಾರೆ ಎನ್ನುವ ಸಹಾಯಕಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಅಂಗನವಾಡಿ ಸಹಾಯಕಿಗೆ ಥಳಿಸಿ ಕುಡಗೋಲಿನಿಂದ ಹೊಡೆಯಲಾಗಿದೆ. ಅಂಗನವಾಡಿ ಸಹಾಯಕಿಯ ಮೂಗು ಕಟ್ ಆಗಿ ಶ್ವಾಸಕೋಶದಲ್ಲಿ ರಕ್ತ ಹೋಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಮಹಿಳೆಯ ಪತಿ ಮೂಗನಾಗಿದ್ದು, ಇದೇ ಕೆಲಸದ ಮೇಲೆ ಬದುಕು ಕಟ್ಟಿಕೊಂಡಿದ್ದರಂತೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment