Home » ಕನ್ಯಾಡಿ: ವಿದ್ಯುತ್ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಹಾನಿ

ಕನ್ಯಾಡಿ: ವಿದ್ಯುತ್ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಹಾನಿ

0 comments

ಬೆಳ್ತಂಗಡಿ: ಕನ್ಯಾಡಿ-2 ಗ್ರಾಮದ ಮೂಡಾಯಿಬೆಟ್ಟು ರಸ್ತೆ ಸಮೀಪ ಎಚ್ ಟಿ ಲೈನ್, ಎಲ್ ಟಿ ಲೈನ್ ಮೇಲೆ ಬಿದ್ದು ಸುತ್ತಮುತ್ತಲಿನ ಮನೆಗಳ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳಿಗೆ ಹಾನಿಯಾದ ಘಟನೆ ಜ..17 ರಂದು ನಡೆದಿದ್ದು , ಇನ್ನೂ ಸೂಕ್ತ ಕ್ರಮ ತೆಗೆದುಕೊಳ್ಳದ ಹಿನ್ನಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಎಚ್ ಟಿ ವಿದ್ಯುತ್ ಲೈನ್ ಮೇಲ್ಬಾಗದಲ್ಲಿ ಇದ್ದ ಮರದ ರೆಂಬೆ ತಂತಿ ಮೇಲೆ ಬಿದ್ದ ಪರಿಣಾಮ ಪಂಪ್ ಸೆಟ್, ಮನೆಗಳ ವಯರಿಂಗ್, ಟಿವಿ ಇನ್ನಿತರ ಸಲಕರಣೆಗಳಿಗೆ ಹಾನಿಯಾಗಿದೆ.ಸ್ಥಳಕ್ಕೆ ಜೆಇ ಸುಹಾಸ್ ಹಾಗೂ ಲೈನ್ ಮ್ಯಾನ್ ಅಬ್ದುಲ್ ಎಂಬವರು ಭೇಟಿ ನೀಡಿದ್ದಾರೆ.

ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಕುರಿತು ಸ್ಥಳೀಯರು ಉಜಿರೆ ವಿಭಾಗದ ಎಇಇ ಅವರಿಗೆ ಮೌಖಿಕ ದೂರು ನೀಡಿದ್ದರೂ ಘಟನೆ ನಡೆದು ಎರಡು ದಿನವಾದರೂ ಭೇಟಿ ನೀಡಿಲ್ಲ. ಟ್ರಿ ಟ್ರಿಮ್ಮಿಂಗ್ ಕಾರ್ಯ ಅಥವಾ ಪೈಪ್ ಅಳವಡಿಸಿದ್ದಲ್ಲಿ ಹಾನಿ ಸಂಭವಿಸುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದ್ದು,ಇನ್ನಾದರೂ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

You may also like

Leave a Comment