7
ಬೆಳ್ತಂಗಡಿ: ಶುಕ್ರವಾರ ಚಾರ್ಮಾಡಿ ಘಾಟಿಯಲ್ಲಿ ಸಂಜೆ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು ಬೀಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಭಾರೀ ಮಂಜು ಬೀಳುತ್ತಿರುವ ಕಾರಣ ದಾರಿ ಕಾಣದೇ ಅಪಘಾತ ಸಂಭವಿಸಿದೆ.

ಬೊಲೆರೋ ವಾಹನವೊಂದು ಚಾರ್ಮಾಡಿ ಘಾಟಿ ಬಿದಿರುತಳ ಗ್ರಾಮದ ಬಳಿ ಮಂಗಳೂರಿಗೆ ಸಾಗುತ್ತಿದ್ದಾಗ, ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಗಾಡಿ ಗೋಡೆಯಿಂದಾಚೆ ಅಂದರೆ ಪ್ರಪಾತಕ್ಕೆ ಉರುಳದೇ ಇರುವುದು ಅದೃಷ್ಟ ಎಂದು ಹೇಳಬಹುದು. ವಾಹನದಲ್ಲಿದ್ದ ಪ್ರಯಾಣಿಕರು ಭಾರೀ ಅನಾಹುತದಿಂದ ತಪ್ಪಿದ್ದಾರೆ.

ಚಾರ್ಮಾಡಿಯಲ್ಲಿ 22 ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಜೊತೆಗೆ ಮಂಜು ಆವರಿಸಿದ್ದು, ಚಾಲಕರು ಚಾಲನೆ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


