Home » ಬೆಳ್ತಂಗಡಿ: 25 ರ ಹರೆಯದಲ್ಲೇ ಹೃದಯಾಘಾತಕ್ಕೊಳಗಾದ ಯುವಕ!

ಬೆಳ್ತಂಗಡಿ: 25 ರ ಹರೆಯದಲ್ಲೇ ಹೃದಯಾಘಾತಕ್ಕೊಳಗಾದ ಯುವಕ!

0 comments

ಬೆಳ್ತಂಗಡಿ: ಇತ್ತೀಚೆಗೆ ಹದಿ ಹರೆಯದವರಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚುತ್ತಿರುವ ಘಟನೆ ನಡೆಯುತ್ತಿರುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಈ ಆಘಾತಕಾರಿ ಘಟನೆಗೆ ಇನ್ನೊಂದು ಸುದ್ದಿ ಸೇರ್ಪಡೆಯಾಗಿದ್ದು, 25ರ ಹರೆಯದ ಯುವಕನೋರ್ವ ತನ್ನ ಮನೆಯಲ್ಲಿರುವಾಗ ಹೃದಯಾಘಾತದಿಂದ ಸಾವಿಗೀಡಾದ ದುರದೃಷ್ಟಕರ ಘಟನೆ ನಡೆದಿದೆ.

ಕಿರ್ನಡ್ಕ ನಿವಾಸಿ ಕಿಟ್ಟಣ್ಣ ನಾಯ್ಕ ಮತ್ತು ವೇದಾವತಿ ದಂಪತಿಗಳ ಪುತ್ರ ಪ್ರದೀಪ್‌ (25) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಈ ಘಟನೆ ಸೆ.8ರಂದು ನಡೆದಿದೆ.

ಈ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕಿರ್ನಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಪ್ರದೀಪ್‌ ಎಂದು ಗುರುತಿಸಲಾಗಿದ್ದು, ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾದರೂ, ಜೀವ ಉಳಿಯಲಿಲ್ಲ ಎಂದು ವರದಿಯಾಗಿದೆ.

 

You may also like

Leave a Comment