Home » ಬೆಳ್ತಂಗಡಿ: ಕಿಲ್ಲೂರು ಜುಮ್ಮಾ ಮಸೀದಿಯಲ್ಲಿ ಹೊಡೆದಾಟ, ದೂರು ದಾಖಲು

ಬೆಳ್ತಂಗಡಿ: ಕಿಲ್ಲೂರು ಜುಮ್ಮಾ ಮಸೀದಿಯಲ್ಲಿ ಹೊಡೆದಾಟ, ದೂರು ದಾಖಲು

0 comments

ಬೆಳ್ತಂಗಡಿ :ಕಿಲ್ಲೂರು ಮೋಐದೀನ್ ಜುಮ್ಮಾ ಮಸೀದಿ ವಾರ್ಷಿಕ ಸಭೆಯಲ್ಲಿ ಪರಸ್ಪರ ಜಗಳ ನಡೆದಿದ್ದು, ಬಿಡಿಸಲು ಹೋದವರಿಗೂ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ನಾವೂರ ಎರ್ಮಾಳ ನಿವಾಸಿ ಸಿದ್ದಿಕ್ ಹಮೀದ್(41) ಅವರಿಗೆ ಡಿಸೆಂಬರ್ 31 ರಂದು ವಾರ್ಷಿಕ ಸಭೆ ಕಾರ್ಯಕ್ರಮಕ್ಕೆ ಆಹ್ವಾನವಿದ್ದು, ಈ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 2:30 ಯಿಂದ 3:30 ಕ್ಕೆ ಪರಸ್ಪರ ಜಗಳ ನಡೆಯುತ್ತಿತ್ತು.

ಫಿರ್ಯಾದಿದಾರರು ಜಗಳ ಬಿಡಿಸಲು ಹೋಗಿ ವಾಪಾಸು ಬರುವಾಗ ಆರೋಪಿಗಳಾದ ಅಬ್ದುಲ್ ಅಜೀಜ್, ಅಶ್ರಫ್ ಬದ್ರುದ್ದೀನ್ ,ಹನೀಫ್ ಸೇರಿಕೊಂಡು ಸಿದ್ದಿಕ್
ಹಮೀದ್(41) ಅವರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:341,323,506,504,r/w
34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment