Home » ಬೆಳ್ತಂಗಡಿ :ಉಜಿರೆ ಓಡಲ ನಿವಾಸಿ ಜಯಾನಂದ ಪೂಜಾರಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ :ಉಜಿರೆ ಓಡಲ ನಿವಾಸಿ ಜಯಾನಂದ ಪೂಜಾರಿ ಹೃದಯಾಘಾತದಿಂದ ನಿಧನ

0 comments

ಬೆಳ್ತಂಗಡಿ :ಉಜಿರೆ ಗ್ರಾಮದ ಓಡಲ -ಮುಂಡತ್ತೋಡಿ ನಿವಾಸಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರು ದಿ| ಅಣ್ಣಿ ಪೂಜಾರಿ ಅವರ ಪುತ್ರ ಜಯಾನಂದ ಪೂಜಾರಿ (43)ಎಂಬುವವರೆಂದು ತಿಳಿದು ಬಂದಿದ್ದು,ಹೃದಯಾಘಾತದಿಂದ ಮೃತ ಪಟ್ಟಿರುತ್ತಾರೆ.

ಇವರು ಓಡಲದ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಆಡಳಿತ ಮಂಡಳಿಯ ಮಾಜಿ ಸದಸ್ಯರಾಗಿದ್ದರು.ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಇವರು ಬಿಜೆಪಿ ಪಕ್ಷದ ಸ್ಥಳೀಯ ವಾರ್ಡ್ ಸಮಿತಿ ಸದಸ್ಯರಾಗಿದ್ದರು.ಮೃತರು ತಾಯಿ, ಇಬ್ಬರು ಸಹೋದರರು, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

You may also like

Leave a Comment