Home » Liquor Sale Ban: ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ! ಹಲವೆಡೆ ಮದ್ಯ ನಿಷೇಧ, ಸೆ.21 ರಿಂದ ಸೆ.30 ರವರೆಗೆ ಮದ್ಯ ಸಿಗಲ್ಲ

Liquor Sale Ban: ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ! ಹಲವೆಡೆ ಮದ್ಯ ನಿಷೇಧ, ಸೆ.21 ರಿಂದ ಸೆ.30 ರವರೆಗೆ ಮದ್ಯ ಸಿಗಲ್ಲ

by Mallika
1 comment

Liquor Sale Ban: ಗಣೇಶನ ಹಬ್ಬ ಮುಗಿದಿದೆ. ಇಂದು ಏರಿಯಾ ಏರಿಯಾಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನಿಗೆ ಮೆರವಣಿಗೆ ಮೂಲಕ ವಿಸರ್ಜನೆ ಮಾಡುವ ಸಮಯ ಬಂದಿದೆ. ಹಾಗಾಗಿ ಇಂದು ಬೆಂಗಳೂರಿನ ಹಲವು ಕಡೆ ಗಣೇಶ ವಿಸರ್ಜನೆ ಕಾರ್ಯಕ್ರಮ ಇರುವುದರಿಂದ ಇಂದು ಮದ್ಯ ನಿಷೇಧ ಮಾಡಲಾಗಿದೆ.( Liquor Sale Ban in Baengaluru)

ಗಣೇಶ ಮೆರವಣಿಗೆ ಕಾರಣ ಕುಡಿದ ಅಮಲಿನಲ್ಲಿ ಏನಾದರೂ ಗಲಾಟೆ ನಡೆಯುವುದನ್ನು ತಡೆಗಟ್ಟಲು ಮದ್ಯದಂಗಡಿ, ಬಾರ್‌ ಆಂಡ್‌ ರೆಸ್ಟೋರೆಂಟ್‌ ಮತ್ತು ವೈನ್ಸ್‌ಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಬೆಂಗಳೂರಿನ ಉತ್ತರ, ಕೇಂದ್ರ, ಈಶಾನ್ಯ, ಪೂರ್ವ ವಿಭಾಗದ ಪೊಲೀಸ್‌ ಠಾಣಾ ವ್ಯಾಫ್ತಿಯಲ್ಲಿ ನಿಷೇಧ ಹೇರಲಾಗಿದೆ. ಅಂದರೆ ಸೆ.21ರಿಂದ ಸೆ.30 ರವರೆಗೆ ಬೆಂಗಳೂರಿಗರಿಗೆ ಮದ್ಯ ಸೌಲಭ್ಯ ಇಲ್ಲ.

ಮದ್ಯ ಮಾರಾಟ ಎಲ್ಲೆಲ್ಲಿ ಇಲ್ಲ?
ಬೆಂಗಳೂರಿನ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ, ಯಲಹಂಕ, ಕೊಡಿಗೆಹಳ್ಳಿ, ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಸಂಜೆ 6ರಿಂದ ಸೆ.25ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ನಿಷೇಧ.
ಪೂರ್ವ ವಿಭಾಗದ ಕೆ.ಜಿ. ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿ ನಗರ, ಹೆಣ್ಣೂರು, ಭಾರತಿನಗರ, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಬೆಳಗ್ಗೆ 6ರಿಂದ ಸೆ.24ರ ಬೆಳಗ್ಗೆ 6ರವರೆಗೆ ಮದ್ಯ ನಿಷೇಧ
ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಸೆ.30ರ ಬೆಳಗ್ಗೆ 6ರಿಂದ ಅಕ್ಟೋಬರ್ 1ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧ
ಬೆಂಗಳೂರು ಉತ್ತರ ವಿಭಾಗದ ಜೆ.ಸಿ.ನಗರ, ಆರ್‌.ಟಿ.ನಗರ, ಹೆಬ್ಬಾಳ, ಸಂಜಯ ನಗರದಲ್ಲಿ ಸೆ.21ರ ಬೆಳಿಗ್ಗೆ 6 ರಿಂದ ಸೆ.22ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ
ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಹಲಸೂರು ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 24ರ ಬೆಳಗ್ಗೆ 6ರಿಂದ ಸೆಪ್ಟೆಂಬರ್ 25ರ ಬೆಳಗ್ಗೆ 6 ಗಂಟೆವರಗೆ ಮದ್ಯ ಮಾರಾಟ ನಿಷೇಧ

 

You may also like

Leave a Comment