Bengaluru Auto Driver: ರಾಜ್ಯದ ರಾಜಧಾನಿಯ ಟ್ರಾಫಿಕ್ ಎಂದರೆ ಕೇಳೋದೇ ಬೇಡ!! ಟ್ರಾಫಿಕ್ ಮಧ್ಯೆ ಗಂಟೆಗಟ್ಟಲೆ ಕೂರುವುದು ದೊಡ್ಡ ಸಮಸ್ಯೆ ಎಂದರೆ ತಪ್ಪಾಗದು! ಡ್ರೈವರ್ಗಳಿಗೆ ಕಾದು ಕಾದು ಸಾಕಾಗಿ ಹೋಗುವುದು ಸುಳ್ಳಲ್ಲ. ಹೀಗಾಗಿ, ಬೆಂಗಳೂರು ಆಟೋ ಡ್ರೈವರ್(Bengaluru Auto Driver)ಒಬ್ಬರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದೇನು ಗೊತ್ತಾ?
ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬನ ಬುದ್ದಿವಂತಿಕೆ ಕಂಡು ನೆಟ್ಟಿಗರು ಫುಲ್ ಫಿದಾ ಆಗಿ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಮೂಲಕ ಸರಾಗವಾಗಿ, ಆರಾಮವಾಗಿ ಪ್ರಯಾಣಿಸಲು ತನ್ನ ಡ್ರೈವಿಂಗ್ ಸೀಟಿನಲ್ಲಿ ರಿವಾಲ್ವಿಂಗ್ ಕುರ್ಚಿಯನ್ನು ಆಟೋ ಚಾಲಕ ಅಳವಡಿಸಿದ್ದು, ಟ್ರಾಫಿಕ್ ನಿಂದಾಗಿ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವುದನ್ನ ತಪ್ಪಿಸುವ ನಿಟ್ಟಿನಲ್ಲಿ ಎಷ್ಟೋ ಚಾಲಕರು ಹಿಂಬದಿಯಲ್ಲಿ ದಿಂಬು ಇಟ್ಟುಕೊಳ್ಳುವುದನ್ನು ಅಥವಾ ಬಟ್ಟೆ ಗಂಟನ್ನು ಇಟ್ಟುಕೊಳ್ಳುವುದನ್ನು ನೋಡಿರುತ್ತೀರಿ. ಆದರೆ ವೈರಲ್ ಆದ ಫೋಟೋದಲ್ಲಿನ ಚಾಲಕ ತನ್ನ ಸೀಟಿನ ಹಿಂಬದಿಯಲ್ಲಿ ರಿವಾಲ್ವಿಂಗ್ ಕುರ್ಚಿಯ ಹಿಂಬದಿ ಸೀಟ್ ಅನ್ನು ಅಳವಡಿಸಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.
ಕಚೇರಿ ಮತ್ತು ಗೇಮಿಂಗ್ ಸೆಂಟರ್ಗಳಲ್ಲಿ ಆಕರ್ಷಕ ಖುರ್ಚಿಗಳನ್ನು(Chair) ನೋಡಿರುವುದು ಸಹಜ. ಇದೇ ಚೇರ್ ಅನ್ನು ಆಟೋ ಡ್ರೈವರ್ ಸೀಟ್ ಆಗಿ ಬಳಕೆ ಮಾಡಿಕೊಂಡರೆ ಹೇಗಿರಬಹುದು? ಕೇಳಿದಾಗ ಅಚ್ಚರಿ ಎನಿಸಬಹುದು!! ಆದರೆ, ಬೆಂಗಳೂರಿನ (Bengaluru) ಆಟೋ (Auto) ಡ್ರೈವರ್ ಒಬ್ಬರು ಕೂರುವ ಸೀಟ್ಗೆ ರಿವಾಲ್ವಿಂಗ್ ಕುರ್ಚಿ ಅಳವಡಿಸಿಕೊಂಡಿದ್ದಾರೆ. ಈ ರಿವಾಲ್ವಿಂಗ್ ಕುರ್ಚಿಗಳು ಸ್ವಲ್ಪ ಎತ್ತರವಾಗಿದ್ದು, ಆಸರೆಗಿರುವ ಭಾಗ ಕೊಂಚ ಉದ್ದವಾಗಿರುತ್ತದೆ. ಈ ಕುರ್ಚಿ ಅಳವಡಿಸಿಕೊಂಡ ಪರಿಣಾಮ ಆರಾಮವಾಗಿ ಕುಳಿತು ಟ್ರಾಫಿಕ್ ನಡುವೆ ಕೂಡ ಸಲೀಸಾಗಿ ಆಟೋ ಓಡಿಸಲು ಸಾಧ್ಯವಾಗುತ್ತದೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಈ ವೀಡಿಯೋ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಮೂರು ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದ್ದು, ನಾನಾ ಬಗೆಯ ಕಾಮೆಂಟ್ಸ್ ಗಳು ಬರುತ್ತಿವೆ.
