ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತು ಕೇಂದ್ರ ಸರಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ರಾಜ್ಯ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಬಗ್ಗೆ ರಾಜ್ಯ ಸರಕಾರಗಳೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಲೋಕಸಭೆಯಲ್ಲಿ ಇಂದು ಕೇಂದ್ರ ಸರಕಾರವು ಹೇಳಿದೆ.
ಸಿಬಿಎಸ್ಇ 6,7 ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ಈಗಾಗಲೇ ಕಲಿಸುತ್ತಿದೆ. ಹಾಗಾಗಿ ರಾಜ್ಯ ಸರಕಾರವು ಬಯಸಿದರೆ ಭಗವದ್ಗೀತೆ ಹಾಗೂ ಬೋಜ್ ಪುರಿ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಹುದು ಎಂದು ಶಿಕ್ಷಣ ಖಾತೆ ಅನ್ನಪೂರ್ಣಾದೇವಿ ಹೇಳಿದ್ದಾರೆ
ಕೇಂದ್ರ ಸರಕಾರವು ಈ ಬಗ್ಗೆ ಏನಾದರೂ ನಿಬಂಧನೆ ತರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಭಗವದ್ಗೀತೆ ಕಲಿಸಲು ರಾಜ್ಯ ಸರಕಾರವು ಮುಂದಾಗಬಹುದು ಇದಕ್ಕೆ ಕೇಂದ್ರದ ಅನುಮತಿ ಇದೆ ಎಂದು ಹೇಳಿದ್ದಾರೆ.
