Home » BIGG BOSS Kannada OTT : “ನಾನು ಕಬಡ್ಡಿ ಸಖತ್ ಆಗಿ ಆಡ್ತೀನಿ” – ವಾರೆವ್ಹಾ ಸೋನು ಗೌಡ

BIGG BOSS Kannada OTT : “ನಾನು ಕಬಡ್ಡಿ ಸಖತ್ ಆಗಿ ಆಡ್ತೀನಿ” – ವಾರೆವ್ಹಾ ಸೋನು ಗೌಡ

by Mallika
0 comments

ನಂದು ಟೀಂನಲ್ಲಿ ಸೋನು ಕೂಡ ಇದ್ದರು. ಅವರು ಆಟ ಆಡಿಲ್ಲ. ಆದರೂ ತಂಡ ಗೆದ್ದಿದೆ. ‘ಸೋನು ಆಟ ಆಡಿಲ್ಲ. ಆದರೂ ಅವರ ತಂಡ ಗೆದ್ದಿದೆ. ಅವರು ಲಕ್ಕಿ ಚಾರ್ಮ್’ ಎಂದರು ಸೋಮಣ್ಣ. ಈ ಮಾತನ್ನು ಕೇಳಿ ಸೋನುಗೆ ಸಖತ್ ಖುಷಿ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರು ಒಂದಲ್ಲ ಒಂದು ವಿಷಯಕ್ಕೆ ನಿಜಕ್ಕೂ ಹೈಲೈಟ್ ಆಗ್ತಾ ಇದ್ದಾರೆ. ತನ್ನ ಮಾತಿನಿಂದಲೇ ಗಮನ ಸೆಳೆದ ಸೋನು ಗೌಡ ಹೊರಗಡೆ ಹೇಗೆ ಸುದ್ದಿಯಲ್ಲಿದ್ದಾರೋ ಹಾಗೆನೇ ದೊಡ್ಮನೆಯಲ್ಲಿ ಕೂಡಾ ಹವಾ ಎಬ್ಬಿಸಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೌದು, ದೊಡ್ಮನೆಯಲ್ಲಿ ಅವರ ಪೆಟ್ಟು ಮಾಡಿಕೊಂಡಿದ್ದಾರೆ. ಅದು ಕೂಡಾ ಟಾಸ್ಕ್ ನಲ್ಲಿ ಪಾರ್ಟಿಸಿಪೇಟ್ ಮಾಡದೇನೇ ಸೋನು ಪೆಟ್ಟು ಮಾಡಿಕೊಂಡಿದ್ದಾರೆ ಅನ್ನೋದು ಅಚ್ಚರಿಯ ವಿಚಾರ!

ಈ ಆಟದ ಪ್ರಕಾರ ಎರಡು ಟೀಂ ಮಾಡಲಾಗಿದೆ. ಒಂದು ಟೀಂಗೆ ನಂದು ಕ್ಯಾಪ್ಟನ್ ಆದರೆ ಮತ್ತೊಂದು ಟೀಂಗೆ ಸೋಮಣ್ಣ ನಾಯಕ. ಪ್ರತಿ ಟೀಂಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನ ಅನ್ವಯ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಇಲ್ಲಿ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಿರಲಾಗುತ್ತದೆ. ಒಬ್ಬರು ಅಲ್ಲಿಟ್ಟ ತಿಂಡಿ ತಿನ್ನಬೇಕು. ಆ ತಿಂಡಿ ಹೇಗಿದೆ ಎಂಬುದನ್ನು ರುಚಿಯ ಆಧಾರದ ಮೇಲೆ ವಿವರಿಸಬೇಕು. ಎದುರಿದ್ದವರು ಅದು ಯಾವ ತಿಂಡಿ ಎಂದು ಹೇಳಬೇಕು. ಈ ಆಟದಲ್ಲಿ ನಂದು ತಂಡದವರು ಗೆದ್ದರು.

ನಂದು ಟೀಂನಲ್ಲಿ ಸೋನು ಕೂಡ ಇದ್ದರು. ಅವರು ಆಟ ಆಡಿಲ್ಲ. ಆದರೂ ತಂಡ ಗೆದ್ದಿದೆ. ‘ಸೋನು ಆಟ ಆಡಿಲ್ಲ. ಆದರೂ ಅವರ ತಂಡ ಗೆದ್ದಿದೆ. ಅವರು ಲಕ್ಕಿ ಚಾರ್ಮ್’ ಎಂದರು ಸೋಮಣ್ಣ. ಈ ಮಾತನ್ನು ಕೇಳಿ ಸೋನುಗೆ ಸಖತ್ ಖುಷಿ ಆಗಿದೆ. ಅವರು ಹಿರಿಹಿರಿ ಹಿಗ್ಗಿದ್ದಾರೆ.

‘ಬಿಗ್ ಬಾಸ್‌ನಲ್ಲಿ ಕಬ್ಬಡ್ಡಿ ಆಡುವ ಟಾಸ್ಕ್ ನೀಡಬೇಕಿತ್ತು’ ಎಂದು ಸೋಮಣ್ಣ ಹೇಳಿದರು. ‘ನಾನು ಕಬಡ್ಡಿನ ಸಖತ್ ಆಗಿ ಆಡ್ತೀನಿ’ ಎಂದರು ಸೋನು. ಸೋಮಣ್ಣ ಅವರು ನಾನು ಕೂಡ ಕಬಡ್ಡಿ ಚೆನ್ನಾಗಿ ಆಡ್ತೀನಿ ಎಂದರು. ಸೋಮಣ್ಣ ಹಾಗೂ ಸೋನು ಇಬ್ಬರೂ ಮನೆಯಲ್ಲೇ ಕಬಡ್ಡಿ ಆಡೋಕೆ ಶುರು ಮಾಡಿದರು. ಈ ವೇಳೆ ಸೋನು ಕೈಗೆ ಗಾಯ ಆಗಿದೆ. ಇದರಿಂದಾಗಿ ನಂತರ ಅವರ ಕೈಗೆ ಹೊಲಿಗೆ ಹಾಕಲಾಗಿದೆ. ದೊಡ್ಡ ಗಾಯ ಆಗಿದ್ದರಿಂದ ಸೋನು ತೀವ್ರ ನೋವು ಅನುಭವಿಸಿದ್ದಾರೆ. ಬ್ಯಾಂಡೇಜ್ ಹಾಕಿಕೊಂಡೇ ಟಾಸ್ಕ್ ಪೂರ್ತಿ ಮಾಡಿದ್ದಾರೆ ಸೋನು.

You may also like

Leave a Comment