Home » Bihar: ಹಿಂದೂ ದೇವಾಲಯ ಅರ್ಚಕನ ಕಣ್ಣು ಕಿತ್ತು, ಜನನಾಂಗ ಕತ್ತರಿಸಿ ಭೀಕರವಾಗಿ ಕೊಂದ ಪಾಪಿಗಳು !!

Bihar: ಹಿಂದೂ ದೇವಾಲಯ ಅರ್ಚಕನ ಕಣ್ಣು ಕಿತ್ತು, ಜನನಾಂಗ ಕತ್ತರಿಸಿ ಭೀಕರವಾಗಿ ಕೊಂದ ಪಾಪಿಗಳು !!

0 comments
Bihar

Bihar: ಹಿಂದೂ ದೇಗುಲದ ಅರ್ಚಕರೊಬ್ಬರ ಕಣ್ಣುಗಳನ್ನು ಕಿತ್ತು, ಜನನಾಂಗ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ (Bihar)ಲ್ಲಿ ನಡೆದಿದ್ದು ಹಿಂಸಾಚಾರ ಭುಗಿಲೆದ್ದಿದೆ.

 

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ದನಾಪುರ ಈ ಒಂದು ಅಘಾತಕಾರಿ ಘಟನೆ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಅಂದಹಾಗೆ ಶಿವದೇವಾಲಯದ ಅರ್ಕರಾದ 32 ವಯಸ್ಸಿನ ಮನೋಜ್ ಕುಮಾರ್ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಆದರೆ ಒಂದು ವಾರದ ಬಳಿಕ, ಅಂದರೆ ಶನಿವಾರ ಸಂಜೆ ಅರ್ಚಕರ ಮೃತದೇಹವು ಪೊದೆಯೊಳಗೆ ಪತ್ತೆಯಾಯಿತು. ಈ ಹತ್ಯೆಗೆ ಪೊಲೀಸರ ನಿರ್ಲಕ್ಷ್ಯ, ಗ್ರಾಮದಲ್ಲಿ ಗೂಂಡಾಗಳ ಅಟ್ಟಹಾಸವೇ ಕಾರಣ ಎಂದು ಆರೋಪಿಸಿ ಭಾರಿ ಹಿಂಸಾಚಾರ ನಡೆದಿದೆ.

 

ಅಂದಹಾಗೆ ದನಾಪುರ ಗ್ರಾಮದ ಶಿವ ದೇವಸ್ಥಾನದಲ್ಲಿ ಮನೋಜ್ ಕುಮಾರ್(Manoj kumar) ಪ್ರಧಾನ ಅರ್ಚಕರಾಗಿದ್ದರು. ಮನೋಜ್ ಕುಮಾರ್ ಯಾವುದೇ ವಿವಾದಕ್ಕೆ ಸಿಲುಕಿದವರಲ್ಲ. ಯಾರನ್ನೂ ನೋಯಿಸಿದವರಲ್ಲ. ಯಾರ ಜೊತೆಗೂ ಮನಸ್ತಾಪ ಬಂದಿಲ್ಲ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ಹಂಚುತ್ತಿದ್ದರು. ಮನೋಜ್ ಕುಮಾರ್ ಪ್ರತಿನಿತ್ಯ ಶಿವನ ಸೇವೆ ಸಲ್ಲಿಸುತ್ತಾ ಜೀವನ ಸಾಗಿಸುತ್ತಿದ್ದರು. ಒಂದು ವಾರದ ಹಿಂದೆ ಮನೋಜ್ ಕುಮಾರ್ ಮನೆಯಿಂದ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿದ್ದಾರೆ. ದೇವಸ್ಥಾನಕ್ಕೆ ತಲುಪಿ ಪೂಜಾ ಕೈಂಕರ್ಯ ಆರಂಭಿಸಿದ್ದಾರೆ. ಕೆಲ ಹೊತ್ತಲ್ಲಿ ಮನೋಜ್ ಕುಮಾರ್ ನಾಪತ್ತೆಯಾಗಿದ್ದಾರೆ.

 

ಮನೋಜ್ ಕುಮಾರ್ ಅವರ ಕುಟುಂಬ ಮಂಗಳವಾರ ನಾಪತ್ತೆ ದೂರು ನೀಡಿದ್ದು, ಪೊಲೀಸರು ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು. ಆದರೂ ಇದೀಗ ಗ್ರಾಮಸ್ಥರೆಲ್ಲರೂ ಪೋಲೀಸರ ನಿರ್ಲಕ್ಷ್ಯತೆಯೇ ಇದಕ್ಕೆ ಕಾರಣ ಎಂದು ಘರ್ಷಣೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪೋಲೀಸ್ ವಾಹನಗಳಿಗೂ ಬೆಂಕಿಹಚ್ಚಿದ್ದಾರೆ. ಸದ್ಯ ಈ ಕೊಲೆ ಯಾಕಾಯಿತು ಎಂದು ಇನ್ನು ತನಿಖೆಯಿಂದ ತಿಳಿದು ಬರಬೇಕಿದೆ.

You may also like

Leave a Comment