Home » Reels ಮಾಡುವುದನ್ನು ನಿಲ್ಲಿಸು ಎಂದಿದ್ದಷ್ಟೇ; ಕೋಪಗೊಂಡ ಪತ್ನಿ ಪತಿಯನ್ನೇ ಮುಗಿಸಿದ್ಳು!!!

Reels ಮಾಡುವುದನ್ನು ನಿಲ್ಲಿಸು ಎಂದಿದ್ದಷ್ಟೇ; ಕೋಪಗೊಂಡ ಪತ್ನಿ ಪತಿಯನ್ನೇ ಮುಗಿಸಿದ್ಳು!!!

1 comment
Crime news

Crime News: ಬಿಹಾರದ ಬೇಗುಸರಾಯ್‌ನಲ್ಲಿ ಟಿಕ್‌ಟಾಕ್ ಮತ್ತು ರೀಲ್ಸ್‌ ಮಾಡಬೇಡ ಎಂದ ಪತಿಯನ್ನು ಹೆಂಡತಿ ಮತ್ತು ಅವಳ ಅತ್ತೆ ಅವರನ್ನು ಕೊಲೆ ಮಾಡಿದ್ದಾರೆ. ಖೋಡಾಬಂದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಸಮಸ್ತಿಪುರ ಜಿಲ್ಲೆಯ ನರ್ಹಾನ್ ಗ್ರಾಮದ ನಿವಾಸಿ ಮಹೇಶ್ವರ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ, ಮಹೇಶ್ವರನ ಮದುವೆ 6-7 ವರ್ಷಗಳ ಹಿಂದೆ ಫಫೈತ್‌ ಹಳ್ಳಿಯಲ್ಲಿರು ರಾಣಿ ಕುಮಾರಿ ಜೊತೆ ಆಗಿತ್ತು.

ಮಹೇಶ್ವರ್‌ ಕೋಲ್ಕತ್ತಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಹಾಗೂ ಇತ್ತೀಚೆಗೆ ತನ್ನ ಮನೆಗೆ ಬಂದಿದ್ದ. ಕೆಲವು ದಿನಗಳಿಂದ ಈತನ ಪತ್ನಿ ರಾಣಿ ಕುಮಾರಿ ಟಿಕ್‌ಟಕ್‌ ಮತ್ತು ಇನ್ಸ್‌ಟಾಗ್ರಾಂ ನಲ್ಲಿ ಹಲವು ವೀಡಿಯೋಗಳನ್ನು ಹಾಕುತ್ತಿದ್ದಳು. ಇದರಿಂದ ಬೇಸತ್ತ ಗಂಡ ಮಹೇಶ್ವರ ಇದನ್ನು ಮಾಡಬೇಡ ಎಂದು ಹೇಳಿದ್ದಾನೆ. ಆದರೆ ಪತ್ನಿ ರಾಣಿ ತನ್ನ ಗಂಡನ ಮಾತನ್ನು ಕೇಳಿಲ್ಲ.

ಇದನ್ನೂ ಓದಿ: Makar Sankranti 2024: ಈ ಬಾರಿಯ ಮಕರ ಸಂಕ್ರಾಂತಿ ಯಾವಾಗ? ಜ.14 ಅಥವಾ 15? ಇಲ್ಲಿದೆ ಉತ್ತರ

ರವಿವಾರ ರಾತ್ರಿ 9 ಗಂಟೆ ಮಹೇಶ್ವರ ತನ್ನ ಹೆಂಡತಿ ಮನೆಗೆ ಬಂದಿದ್ದ. ಆ ಸಮಯದಲ್ಲಿ ಗಲಾಟೆ ಪ್ರಾರಂಭವಾಗಿದೆ. ಆವಾಗ ಅಲ್ಲಿದ್ದ ಹೆಂಡತಿಯ ಮನೆಯವರು ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಈ ಘಟನೆಯ ಕುರಿತು ರಾತ್ರಿ 10.30 ರ ಸುಮಾರಿಗೆ ಗೊತ್ತಾಗಿದೆ. ಮಹೇಶ್ವರ ಸಂಬಂಧಿ ಫೋನ್‌ ಮಾಡಿದಾಗ ಇನ್ನೊಬ್ಬರು ತೆಗೆದಾಗ ಸಂಶಯ ಬಂದಿದೆ. ಕೂಡಲೇ ಅಲ್ಲಿಗೆ ಮನೆಗೆ ಕೆಲವರನ್ನು ಕಳುಹಿಸಿದಾಗ ಆತ ಮೃತ ಹೊಂದಿದ ರೀತಿಯಲ್ಲಿ ಪತ್ತೆಯಾಗಿದ್ದಾನೆ.

 

ನಂತರ ಪೊಲೀಸ್‌ ಸ್ಥಳಕ್ಕೆ ಬಂದಿದ್ದು, ಪೋಸ್ಟ್‌ಮಾರ್ಟ್ಮ್‌ಗೆ ಶವವನ್ನು ರವಾನೆ ಮಾಡಿದ್ದಾರೆ. ಈ ಸಂಬಂಧ ಪತ್ನಿ ಮತ್ತ ಸಂಬಂಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

You may also like

Leave a Comment