Home » ಬಲವಾದ ಗಾಳಿ, ಮಳೆಗೆ ಮಗುಚಿದ ದೋಣಿ | 12 ಜನರ ದುರ್ಮರಣ, 3 ಜನ ನಾಪತ್ತೆ

ಬಲವಾದ ಗಾಳಿ, ಮಳೆಗೆ ಮಗುಚಿದ ದೋಣಿ | 12 ಜನರ ದುರ್ಮರಣ, 3 ಜನ ನಾಪತ್ತೆ

0 comments

30ಕ್ಕೂ ಹೆಚ್ಚು ಜನರನ್ನು ಹೊತ್ತ ದೋಣಿಯೊಂದು ಭಾರೀ ಗಾಳಿಗೆ ಮಗುಚಿ 12 ಜನ ಸಾವು ಕಂಡಿದ್ದಾರೆ. ಮಾರ್ಕಾದಿಂದ ಫತೇಪುರ್ ಜಿಲ್ಲೆಯ ಜರೌಲಿ ಘಾಟ್ ಕಡೆಗೆ ಸಾಗುತ್ತಿದ್ದಾಗ ಬಲವಾದ ಗಾಳಿಗೆ ಭಾರಿ ಅಲೆಗಳು ಎದ್ದು ದೋಣಿ ಮಗುಚಿತ್ತು. ಈ ಸಂಧರ್ಭದಲ್ಲಿ 13 ಮಂದಿ ಈಜಿ ದಡ ಸೇರಿದ್ದಾರೆ.

ಈ ಘಟನೆ ಗುರುವಾರ ಸಂಭವಿಸಿದೆ‌. ಯಮುನಾ ನದಿಯಲ್ಲಿ ಸಂಭವಿಸಿದ್ದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ಲಭ್ಯವಾಗಿದೆ. ಶನಿವಾರ ತಡರಾತ್ರಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಇದುವರೆಗೆ 12 ಮೃತದೇಹಗಳು ಪತ್ತೆಯಾಗಿವೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಬಂದಾ ಎಸ್ಪಿ ಅಭಿನಂದನ್ ತಿಳಿಸಿದ್ದಾರೆ.

ಈ ದುರಂತದಲ್ಲಿ 10ಕ್ಕೂ ಹೆಚ್ಚು ಜನರು ಕೊಚ್ಚಿಕೊಂಡು
ಹೋಗಿರುವ ಸಾಧ್ಯತೆ ಇದೆ. ಎನ್‌ಡಿಆರ್‌ಎಫ್,
ಎಸ್‌ಡಿಆರ್‌ಫ್ ಮತ್ತು ಪೊಲೀಸ್ ತಂಡಗಳು ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

‘ಶವಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಘಟನೆ ನಡೆದ 15-20 ಕಿ.ಮೀ ದೂರದಲ್ಲಿ ಶವಗಳು ಪತ್ತೆಯಾಗಿವೆ’ ಎಂದು ಕೃಷ್ಣಾಪುರ ಪೊಲೀಸ್ ಠಾಣೆ ಠಾಣಾಧಿಕಾರಿ ಸಂಜಯ್ ತಿವಾರಿ ತಿಳಿಸಿದ್ದಾರೆ.

You may also like

Leave a Comment