Home » ಬೆಂಗಳೂರಲ್ಲಿ ಗಂಟೆಗಳ ಲೆಕ್ಕದಲ್ಲಿ ಸಿಗ್ತಾರೆ ಬಾಯ್ ಫ್ರೆಂಡ್ಸ್ | Toy Boy ವೆಬ್ ಹುಡುಗರಿಗೆ ತಂದಿಟ್ಟ ಹೊಸ ಸಮಸ್ಯೆ !

ಬೆಂಗಳೂರಲ್ಲಿ ಗಂಟೆಗಳ ಲೆಕ್ಕದಲ್ಲಿ ಸಿಗ್ತಾರೆ ಬಾಯ್ ಫ್ರೆಂಡ್ಸ್ | Toy Boy ವೆಬ್ ಹುಡುಗರಿಗೆ ತಂದಿಟ್ಟ ಹೊಸ ಸಮಸ್ಯೆ !

0 comments

ಬಾಯ್ ಫ್ರೆಂಡ್ಸ್, ಇನ್ನಾದರೂ ಹುಷಾರು ಮಾರಾಯ್ರೆ. ನಿಮ್ಮ ಹುಡುಗಿಯ(ರ)ನ್ನು ಜೋಪಾನ ಮಾಡಿಕೊಳ್ಳಿ. ಇಲ್ಲದೆ ಹೋದರೆ ಆಕೆಯನ್ನು ಕೇರ್ ಮಾಡಲು ಇಲ್ಲೊಂದು ವೆಬ್ ಸೈಟ್ ಪಾರ್ಟ್ ಟೈಂ ಬಾಯ್ ಫ್ರೆಂಡ್ ಅನ್ನು ಕಾಯ್ದಿರಿಸಿಕೊಂಡು ಕಾದು ಕೂತಿದೆ. ಎಚ್ಚರ ಗೆಳೆಯ!!

ಪ್ರೀತಿ ಕೈಕೊಟ್ಟಿದೆ, ಪ್ರೇಮಿ ಮುನಿದು ದೂರಾಗಿದ್ದಾನೆ. ಆತ ನಿಜವಾಗಿಯೂ ನಿಮ್ಮನ್ನು ಪ್ರೀತಿಸಿಯೇ ಇರಲಿಲ್ಲವೇನೋ, ಎನ್ನುವ ಫೀಲಿಂಗ್​ನಲ್ಲಿರಬೇಡಿ. ಅವನಲ್ಲದಿದ್ದರೆ ‘ ಅವನು ‘ ರೆಡಿಯಾಗಿದ್ದಾರೆ. ಬಾಡಿಗೆ ಬಾಯ್ ಫ್ರೆಂಡ್ ಗಳು ಗಂಟೆಗಳ ಲೆಕ್ಕದಲ್ಲಿ ಕಾಯ್ತಿದ್ದಾರೆ.

ಬೆಂಗಳೂರಿನ ತಲೆ ಕೆಡಿಸಿಕೊಂಡ ( ತಲೆ ಹಾಳು ಮಾಡಿಕೊಂಡ);ಟೆಕ್ಕಿಗಳು ವೆಬ್​ಸೈಟ್​ ಒಂದನ್ನು ಸಿದ್ಧಪಡಿಸಿದ್ದು, ಅದು ಗಂಟೆಗಳ ಆಧಾರದಲ್ಲಿ ಬಾಯ್​ಫ್ರೆಂಡ್​ನ್ನು ಬಾಡಿಗೆ ನೀಡುತ್ತಂತೆ.

ಅನೇಕರು ಜೀವನದಲ್ಲಿ ಒಂಟಿಯಾಗಿರುತ್ತಾರೆ, ಅವರು ತಮಗಾಗಿ ಗೆಳೆಯ, ಗೆಳತಿಯರನ್ನು ಹುಡುಕುತ್ತಾರೆ. ಅವರು ಗೆಳೆಯ, ಗೆಳತಿಯರನ್ನು ಬಾಡಿಗೆಗೆ ಪಡೆಯಬಹುದು. ಲೈಫ್ ಟೈಮ್ ಬೇಡ ಅಂದ್ರೆ ಶಾರ್ಟ್ ಆಗಿ ಗಂಟೆಗಳ ಸಾಂಗತ್ಯಕ್ಕೂ ಇಲ್ಲಿ ‘ ಟಾಯ್ ಬಾಯ್ ‘ ಲಭ್ಯ !

” ಏಕಾಂಗಿಯಾಗಿರುವವರು, ಜೀವನದಲ್ಲಿ ತುಂಬಾ ನೊಂದವರು, ಪ್ರೀತಿಯ ವಂಚನೆಗೊಳಗಾದವರಿಗೆ ಈ ಪೋರ್ಟಲ್ ಸಹಾಯಕವಾಗಿದೆ” ಎಂದಿದೆ ಪೋರ್ಟಲ್ ತಯಾರಿಸಿದ ತಂಡ.

ಭಾರತದ ಸಿಲಿಕಾನ್ ವ್ಯಾಲಿ ಹಲವು ಸ್ಟಾರ್ಟ್-ಅಪ್‌ಗಳಿಗೆ ಹೆಸರುವಾಸಿ. ಇಲ್ಲಿನ ಟೆಕ್ಕಿಗಳು ToYBoY ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ, ಇದು ನಗರದ ಜನರಿಗೆ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. tribuneindia.com ನ ಸುದ್ದಿಯ ಪ್ರಕಾರ, ಬಾಡಿಗೆಗೆ ಬಾಯ್‌ಫ್ರೆಂಡ್ ಪಡೆಯುವ ಮೂಲಕ ತಮ್ಮ ಒಂಟಿತನವನ್ನು ಹೋಗಲಾಡಿಸಬಹುದು.

ನೀವು ಗಂಟೆಗೆ ಹಣ ಪಾವತಿಸಿ ಸೇವೆಯಲ್ಲಿ ಗೆಳೆಯನನ್ನು ನೇಮಿಸಿಕೊಳ್ಳಬಹುದು. ಅದೇ ರೀತಿ ಮುಂಬೈ ಮೂಲದ ಯುವಕ ಕೌಶಲ್ ಪ್ರಕಾಶ್ ‘ RABF ಎಂಬ ಆಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಸಹಾಯ ಮಾಡಲು ಅಪ್ಲಿಕೇಶನ್ ಆರಂಭಿಸಲಾಗಿದೆ.

ಈ ಅಪ್ಲಿಕೇಶನ್‌ಗಳು ಇತರ ಡೇಟಿಂಗ್ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿವೆ. ನೀವು ಗೆಳೆಯನನ್ನು ನೇಮಿಸಿಕೊಳ್ಳಲು ಬಯಸಿದರೆ, ನಂತರ ಹೋಗಿ ಖಾತೆಯನ್ನು ರಚಿಸಿ ಮತ್ತು ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಆರಿಸಿ. ನಂತರ, ನೀವು ನಿಮ್ಮ ಸ್ಥಳವನ್ನು ಸೇರಿಸಬಹುದು ಮತ್ತು ನಿಮ್ಮ ಆದ್ಯತೆಯ ವ್ಯಕ್ತಿಯನ್ನು ಭೇಟಿ ಮಾಡಬಹುದು. ಈ ಅಪ್ಲಿಕೇಷನ್ ಪ್ಲೇಸ್ಟೋರ್​ನಲ್ಲಿ ಲಭ್ಯವಿಲ್ಲ.

ಮೊದಲೇ ‘ ಒನ್ ನೈಟ್ ಸ್ಟ್ಯಾಂಡ್ ‘ ಜತೆಗೆ ಸಿಟ್ ಮತ್ತು ಸ್ಲೀಪ್ ಬೆಂಗಳೂರಿಗೆ ಕಾಲಿಟ್ಟಿದೆ. ಅದರ ಮದ್ಯೆ ಹಲವಾರು ಡೇಟಿಂಗ್ ಆ್ಯಪ್ ಗಳ ಹಾವಳಿ. ಈ ವೆಬ್ ಸೈಟಿಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇದೊಂದು ರೀತಿ ಮರ್ಡರ್ ನ ಪ್ರೊಸಿಟಿಟ್ಯೂಷನ್ ಅನ್ನುತ್ತಿದ್ದಾರೆ ಜನರು. ಯಾರು ಈ ಅಪ್ಲಿಕೇಶನ್ ಬಳಸದಂತೆ ಮನವಿ ಮಾಡಲಾಗುತ್ತಿದೆ. ಕ್ಷಣಿಕ ನೆಮ್ಮದಿಗಾಗಿ ಬಾಯ್ ಫ್ರೆಂಡ್ ಹುಡುಕಲು ಹೋಗಿ ಹಣ ಮಾನ ಪ್ರಾಣ ಕಳೆದುಕೊಳ್ಳುವ ಮುನ್ನ ಎಚ್ಚರವಿರಲಿ. ಇದೊಂದು ಸೆಕ್ಸು ಮಾರುವ ವೇದಿಕೆ ಆಗದೆ ಇರಲಿ ಅನ್ನೋದೇ ಇವತ್ತಿನ ನಿರೀಕ್ಷೆ.

You may also like

Leave a Comment