Home » ಪ್ರೇಯಸಿಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾದ ಪಾಗಲ್ ಪ್ರೇಮಿ!, ಕಾರಣ?

ಪ್ರೇಯಸಿಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾದ ಪಾಗಲ್ ಪ್ರೇಮಿ!, ಕಾರಣ?

0 comments

ಪ್ರೀತಿಸಿದ ಆಕೆ ತನಗೆ ಸಿಗಲಿಲ್ಲವೆಂಬ ಸ್ವಾರ್ಥದಿಂದ ಅದೆಷ್ಟೋ ಪ್ರೇಮಿಗಳು ಹತ್ಯೆ ಎಸಗಿದ ಘಟನೆಗಳು ವರದಿಯಾಗಿದೆ. ಇದೀಗ ಅದೇ ರೀತಿ ಇಲ್ಲೊಂದು ಕಡೆ ನಡೆದಿದ್ದು, ತಾನು ಪ್ರೀತಿಸಿದ ಯುವತಿ ಮದುವೆಗೆ ಒಪ್ಪಲಿಲ್ಲ ಎಂದುಕೊಂಡು ಕೋಪದಿಂದ ಆಕೆಯ ರುಂಡವನ್ನೇ ಕತ್ತರಿಸಿದ ಭಯಾನಕ ಘಟನೆ ನಡೆದಿದೆ.

ನಿರ್ಮಲಾ (23 ) ಎನ್ನುವವರು ಭೀಕರವಾಗಿ ಹತ್ಯೆಯಾದ ಯುವತಿಯಾಗಿದ್ದು, ಭೋಜರಾಜ ಈ ಕೃತ್ಯ ಎಸಗಿದ್ದಾನೆ.

ಈ ಭೀಕರ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ನಡೆದಿದೆ. ಭೋಜರಾಜ ನಿರ್ಮಲಾಳನ್ನು ಪ್ರೀತಿಸುತ್ತಿದ್ದ. ನಿರ್ಮಲಾ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಿರ್ಮಲಾಳನ್ನು ಮದುವೆ ಮಾಡಿಕೊಂಡುವಂತೆ ಈ ಮೊದಲು ಆಕೆಯ ಪಾಲಕರಲ್ಲಿ ಈತ ಕೇಳಿದ್ದ. ಆದರೆ ಆಕೆಯ ಮನೆಯವರು ಒಪ್ಪಿರಲಿಲ್ಲ.ಈ ಹಿನ್ನೆಲೆಯಲ್ಲಿ ಭೋಜರಾಜ ಬೇರೊಬ್ಬಳನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ.

ಆದರೆ, ದ್ವೇಷದ ಬೆಂಕಿಯಿಂದ ಕೆಂಡಾಮಂಡಲವಾಗಿದ್ದ ಭೋಜರಾಜ, ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು.

ಇದೇ ಸಮಯಕ್ಕೆ ಕಾಯುತ್ತಿದ್ದ ಈ ಪಾಗಲ್ ಪ್ರೇಮಿ, ಮಚ್ಚಿನಿಂದ ಆಕೆಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಯುವತಿಯ ರುಂಡದೊಂದಿಗೆ ಬಂದಿದ್ದಾನೆ.

ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

You may also like

Leave a Comment