ಬಿಪಿಎಲ್ ಕಾರ್ಡ್ ನೀವೇನಾದರೂ ಹೊಂದಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್. ಬಿಪಿಎಲ್ ಕಾರ್ಡ್‌ನಲ್ಲಿ ಮನೆಯ ಯಜಮಾನ ಪುರುಷನಾಗಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿಯೋಜನೆಯ ಫಲಾನುಭವಿಗಳಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ತಾವು ಅಧಿಕಾರ ವಹಿಸಿಕೊಂಡಾಗ ಜಾರಿ ಮಾಡಿದ್ದು, ಇದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗೆ ಚಾಲನೆ ದೊರಕಿದೆ. ಗೃಹಲಕ್ಷ್ಮಿ ಯೋಜನೆಗೆ ಇದೀಗ ಇದೊಂದು ಮಹಾ ಸಂಕಟ ಎಂದು ಹೇಳಬಹುದು. ಬಿಪಿಎಲ್ ಕಾರ್ಡ್‌ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರೆ ಈ ಎರಡು ಯೋಜನೆಯ ಲಾಭ ಸಿಗುವುದು ಕಷ್ಟಕರ ಎಂದು ಹೇಳಲಾಗುತ್ತಿದೆ.
ಬಿಪಿಎಲ್ ಕಾರ್ಡ್‌ನಲ್ಲಿ ಮಹಿಳೆ ಯಜಮಾನಿ ಸ್ಥಾನದಲ್ಲಿದ್ದರೆ ಅವರಿಗೆ ಮಾತ್ರ ಈ ಉಪಯೋಗ ಪಡೆಯಲು ಸಾಧ್ಯ. ಆದರೆ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದಿದ್ದರೆ ಎರಡು ಸಾವಿರ ರೂ. ಸಿಗದೆ ನಿರಾಸೆಗೊಂಡ ಮಹಿಳೆಯರು ರೇಷನ್ ಕಾರ್ಡ್‌ನಲ್ಲಿ ಮನೆಯ ಯಜಮಾನಿ ಎಂದು ತಿದ್ದು ಮಾಡಲು ಸೆಪ್ಟೆಂಬರ್ ಒಂದರಿಂದ ಸೆ.10 ರವರೆಗೆ ಅವಕಾಶ ಕಲ್ಪಿಸಲಾಗಿದೆ.
