Home » BPL Card: ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆಯಿಂದ ಬಿಗ್ ಶಾಕ್! ನೀವು ಈ ಲಿಸ್ಟ್ ನಲ್ಲಿ ಇದ್ರೆ ದಂಡ ಕಟ್ಟಬೇಕಾಗುತ್ತೆ ಎಚ್ಚರ!

BPL Card: ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆಯಿಂದ ಬಿಗ್ ಶಾಕ್! ನೀವು ಈ ಲಿಸ್ಟ್ ನಲ್ಲಿ ಇದ್ರೆ ದಂಡ ಕಟ್ಟಬೇಕಾಗುತ್ತೆ ಎಚ್ಚರ!

0 comments

BPL Card: ಪ್ರಸ್ತುತ ಸರ್ಕಾರಿ ನೌಕರರಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ಉದ್ಯಮಿಗಳು, ಖಾಸಗಿ ನೌಕರರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬಿಗ್ ಶಾಕ್ ಒಂದನ್ನು ನೀಡಿದೆ.

ಹೌದು,ಯಾದಗಿರಿಯ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಉದ್ಯಮಿಗಳು, ಖಾಸಗಿ ನೌಕರರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ 405 ಎಎವೈ, ಬಿಪಿಎಲ್ 5,375 ಸೇರಿ 5,780 ಕಾರ್ಡ್ ದಾರರಿಗೆ ಬಿಪಿಎಲ್ ಕಾರ್ಡ್ ಅರ್ಹತೆ ಇಲ್ಲದಿದ್ದರೂ ಕಾರ್ಡ್ ಹೊಂದಿದ್ದರಿಂದ ದಂಡ ವಿಧಿಸಲಾಗಿದೆ. ಇನ್ನು ಎಎವೈ, BPL ಬದಲಾಗಿ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಲಾಗಿದೆ. ಅಲ್ಲದೆ ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ ಪೊಲೀಸ್ ತಹಶೀಲ್ದಾರ್ ಗೆ ತಲಾ 8 ಸಾವಿರ ಹಾಗೂ ರೂ 6300 ದಂಡ ವಿಧಿಸಲಾಗಿದೆ.

ಮುಖ್ಯವಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಅಧಿಕಾರಿಗಳು, ಸರ್ಕಾರ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ನಿಗಮಗಳು, ಆದಾಯ ತೆರಿಗೆ, ಸೇವಾ ತೆರಿಗೆ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

You may also like

Leave a Comment