Home » ಹಸೆಮಣೆ ಏರಬೇಕಿದ್ದ ನವವಧು, ಎಂ.ಬಿ.ಬಿ.ಎಸ್ ಪದವೀಧರೆ ದುರಂತ ಅಂತ್ಯ!! ಸಾವಿಗೆ ಕಾರಣವಾಯಿತು ಸಿಹಿತಿಂಡಿ

ಹಸೆಮಣೆ ಏರಬೇಕಿದ್ದ ನವವಧು, ಎಂ.ಬಿ.ಬಿ.ಎಸ್ ಪದವೀಧರೆ ದುರಂತ ಅಂತ್ಯ!! ಸಾವಿಗೆ ಕಾರಣವಾಯಿತು ಸಿಹಿತಿಂಡಿ

by Mallika
0 comments

ನಾಳೆಯ ಹೊಸ ಜೀವನದ ಕನಸಿನಲ್ಲಿದ್ದ ಎಂಬಿಬಿಎಸ್ ಪದವೀಧರೆಯೊಬ್ಬಳ ಬಾಳಿನಲ್ಲಿ ವಿಧಿ ಬೇರೆಯೇ ಬರೆದಿತ್ತು. ಮನೆಯಲ್ಲಿ ಮದುವೆಯ ತಯಾರಿ ಜೋರಾಗಿಯೇ ಸಾಗುತ್ತಿತ್ತು. ಎಲ್ಲಾ ಸಿದ್ಧತೆ ನಡೆಸಿ ಮಂಟಪಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಮದುಮಗಳು ಸಾವನ್ನಪ್ಪಿರುವುದು ದುರಂತವೇ ಸರಿ. ಎಂಬಿಬಿಎಸ್ ಪದವೀಧರೆಯೊಬ್ಬಳು ತನ್ನ ಮದುವೆಯ ಹಿಂದಿನ ದಿನವೇ ಮೃತಳಾಗಿದ್ದು, ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ.

ಇನ್ನೇನು ಹಸೆಮಣೆ ಏರಬೇಕಿದ್ದ ಮದುಮಗಳು ಸಾವನ್ನಪ್ಪಿರುವ ದುತದೃಷ್ಟಕರ ಘಟನೆ ಮಧ್ಯಪ್ರದೇಶದ ಛಿಂದವಾಡದಲ್ಲಿ ನಡೆದಿದೆ

ಮೇ 20 ರಂದೇ ಮದುವೆ ಇತ್ತು. ಆದರೆ ದುರಾದೃಷ್ಟವಶಾತ್ ಮದುಮಗಳು ಸಾವು ಕಂಡಿದ್ದಾಳೆ. ಮದುವೆಯ ಸಂಭ್ರಮದಲ್ಲಿ ತಿಂದ ಉಪಹಾರ ಈಕೆಯ ಪ್ರಾಣವನ್ನೇ ತೆಗೆದುಕೊಂಡುಬಿಟ್ಟಿದೆ. ಹೌದು ಈಕೆ ತಿಂದ ‘ ಡೋಕ್ಲಾ’ ಎಂಬ ತಿನಿಸು ಆಕೆಯ ಜೀವವನ್ನೇ ತಗೊಂಡಿತು. ಡೋಕ್ಲಾ ಉತ್ತರ ಭಾರತದ ಫೇಮಸ್ ತಿಂಡಿ. ಇದನ್ನು ತಿಂದಿರುವ ಈಕೆ, ಆದರೆ ಈ ತಿಂಡಿ ಗಂಟಲಿನಲ್ಲಿ ಸಿಕ್ಕಿಹಾಕೊಂಡು ಸಾವನ್ನಪ್ಪಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಈಕೆಯ ಪ್ರಾಣ ಹಾರಿಹೋಗಿತ್ತು.

ಡೋಕ್ಲಾ ತಿಂದಾಗ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದಾಗ, ನೀರು ಕುಡಿದರೂ ಒಳಗಡೆ ಹೋಗಿಲ್ಲ. ಹೆಚ್ಚು ಕೆಮ್ಮುತ್ತಿದ್ದ ಈಕೆಯನ್ನು ನೋಡಿದ ಮನೆಯವರು ಗಾಬರಿಗೊಂಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ.

ಮೃತ ಎಂಬಿಬಿಎಸ್ ಪದವೀಧರೆಯ ಹೆಸರು ಮೇಘಾ.
ಎಂಬಿಬಿಎಸ್ ಮುಗಿಸಿದ್ದ ಮೇಘಾ ಮುಂಬೈಯಲ್ಲಿ ವೈದ್ಯೆಯಾಗಿ ವೃತ್ತಿ ಆರಂಭಿಸಿದ್ದರು. ಆದರೆ ಈಕೆ ಜೀವನ ಆರಂಭಕ್ಕೂ ಮುನ್ನ ಅಂತ್ಯ ಕಂಡಿದ್ದು ನಿಜಕ್ಕೂ ದುರಂತ.

You may also like

Leave a Comment