Home » Honey moon: ತಂಗಿಯೊಂದಿಗೆ ಹನಿಮೂನ್ ಹೊರಟ ಅಣ್ಣ – ನಂತರ ಆದದ್ದೇ ರೋಚಕ !!

Honey moon: ತಂಗಿಯೊಂದಿಗೆ ಹನಿಮೂನ್ ಹೊರಟ ಅಣ್ಣ – ನಂತರ ಆದದ್ದೇ ರೋಚಕ !!

0 comments

Honey moon : ಕೆಲವು ಕೆಲಸಗಳೇ ಹಾಗೆ. ಅದನ್ನು ಯಾರು ಮಾಡಬೇಕೋ ಅವರೆ ಮಾಡಬೇಕು. ಬದಲಿಗೆ ಮಾಡುತ್ತೇನೆ, ಜೊತೆಯಾಗಿ ಬರುತ್ತೇನೆ ಎಂದರೆ ಅದು ತುಂಬಾ ಅಸ್ತವ್ಯಸ್ತ ಎನಿಸಿ ಅಸಭ್ಯವಾಗುತ್ತದೆ. ಹನಿಮೂನ್ ಕೂಡ ಹಾಗೆಯೇ. ಇದು ಗಂಡ-ಹೆಂಡತಿಯರಿಗೆ ಮೀಸಲಾದದ್ದು. ಆದರೆ ಇಲ್ಲೊಂದೆಡೆ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ತಂಗಿಯೊಂದಿಗೆ ಅಣ್ಣನೊಬ್ಬ ಹನಿಮೂನ್(Honey moon) ಹೋಗಿದ್ದಾನೆ.

ಮಧುಚಂದ್ರಕ್ಕೆ ಹಿಂದೆ ಬೇರೆಯೇ ಅರ್ಥ ಇತ್ತು. ಇಂದು ಅದು ಹನಿಮೂನ್ ಆಗಿ ಮಾರ್ಡನ್ ರೂಪ ಪಡೆದಿದೆ. ಇರಲಿ ಬಿಡಿ, ಹೆಸರು ಬೇರೆಯಾದರೂ ಆಗುವ ಕೆಲಸ ಒಂದೇ ಇರುತ್ತದೆ. ಆದರೆ ಹನಿಮೂನ್ ಗೆ ಹೋಗೋದು ಯಾರು ಹೇಳಿ. ಹೊಸದಾಗಿ ಮದುವೆಯಾದ ನವ ದಂಪತಿಗಳು, ಅಲ್ವೇ? ಆದರೆ ಈ ದಂಪತಿಗಳೊಂದಿಗೆ ಬೇರೆಯವರು ಹೊರಟರೆ ಹೇಗಾಗಬೇಡ ಹೇಳಿ. ಅದೂ ಕೂಡ ಸ್ವಂತ ಅಣ್ಣನೇ ಹೊರಟರೆ ಹೇಗಾಗಬೇಡ ಹೇಳಿ.

ಹೌದು, ಇಲ್ಲೊಂದೆಡೆ ವಿಚಿತ್ರ ಪ್ರಸಂಗುವೊಂದು ನಡೆದಿದೆ. ಮದುವೆಯಾದ ಯುವತಿಗೆ ವಯಸ್ಸಿಉ 25 ವರ್ಷ. ಆಕೆಯ ಪತಿಗೆ 27 ವರ್ಷ. ಒಂದು ವರ್ಷದ ಹಿಂದೆ ಇಬ್ಬರ ಮದುವೆ ನಡೆದಿದೆ. ಮದುವೆ ಸಮಯದಲ್ಲಿ ಹಣವಿಲ್ಲದ ಕಾರಣ ಅವರು ಹನಿಮೂನ್ ಹೋಗಿರಲಿಲ್ಲ. ಇದೀಗ ಸ್ವಲ್ಪ ಉಳಿತಾಯ ಮಾಡಿ, ಇಬ್ಬರೂ ಅಮೆರಿಕಾ (America) ಕ್ಕೆ ಹನಿಮೂನ್ ಹೋಗುವ ಪ್ಲಾನ್ ಮಾಡಿದ್ದಾರೆ. ಈ ವಿಷಯ ಹುಡುಗಿಯ ಅಣ್ಣನಿಗೆ ಗೊತ್ತಾಗಿದೆ. ಆತನು ಕೂಡ ತಂಗಿಯೊಂದಿಗೆ ತಾನೂ ಹನಿಮೂನ್ ಗೆ ಬರೋದಾಗಿ ಪಟ್ಟು ಹಿಡಿದಿದ್ದಾನೆ.

ತಂಗಿಗೆ ಈ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೆ, ತನ್ನ ಅಣ್ಣನಿಗೆ ಹನಿಮೂನ್ ಗೆ ಬರದಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಹನಿಮೂನ್ ಅಂದ್ರೆ ಏನು, ಅಲ್ಲಿಗೆ ಯಾರು ಹೋಗ್ಬೇಕು ಎಂಬುದನ್ನು ಹೇಳಿದ್ದಾಳೆ. ಇದೆಲ್ಲವನ್ನೂ ಕೇಳಿದ ನಂತರವೂ ಸಹೋದರ, ಸಲಿಂಗಿ ಫ್ರೆಂಡ್ ಜೊತೆ ತಾನೂ ಹನಿಮೂನ್ ಬರೋದಾಗಿ ಹೇಳಿದ್ದಾನೆ. ನೀವಿಬ್ಬರು ಜೊತೆಗಿದ್ದರೆ ನಮಗೆ ಪ್ರೈವಸಿ ಸಿಗೋದಿಲ್ಲ ಎಂದು ತಂಗಿ ಹೇಳಿದರೂ ನಮ್ಮ ಸಲಿಂಗಿ ಜೋಡಿಯನ್ನು ಜನ ಒಪ್ಪುತ್ತಾರೋ ಇಲ್ಲವೋ ಎಂದು ಪರೀಕ್ಷಿಸಲು ಬರುವುದಾಗಿ ತಿಳಿಸಿದ್ದಾನೆ.

ವಿಚಿತ್ರ ಅಂದರೆ ಈ ವಿಚಾರ ಹೆತ್ತವರಿಗೆ ತಿಳಿದಿದ್ದು, ಅವರೂ ಮಗನಿಗೆ ಬೆಂಬಲ ನೀಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯದಲ್ಲಿ ಯುವತಿಯು ಈ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ್ದಾಳೆ.

You may also like

Leave a Comment