Home » BSNL ನಿಂದ ಅತಿ ಕಡಿಮೆ ಬೆಲೆಯ ಪ್ಲ್ಯಾನ್‌ ಬಿಡುಗಡೆ!

BSNL ನಿಂದ ಅತಿ ಕಡಿಮೆ ಬೆಲೆಯ ಪ್ಲ್ಯಾನ್‌ ಬಿಡುಗಡೆ!

0 comments
BSNL Recharge

BSNL Recharge : ಇದೀಗ BSNL ನೀಡುತ್ತಿದೆ ಭರ್ಜರಿ ಪ್ಲಾನ್ (plan) ಗಳನ್ನ ಇದರಿಂದ ಜಿಯೋ (jio) ಹಾಗೂ ಏರ್ಟಲ್ (airtel) ಕಂಪನಿಗೆ ಟೆನ್ಷನ್ ಹೆಚ್ಚಾಗಿದೆ. BSNL ಕಂಪನಿ ತಮ್ಮ ಗ್ರಾಹಕರಿಗೆ ಹೊಚ್ಚಹೊಸ ಭರ್ಜರಿ ಪ್ಲಾನ್ ಗಳನ್ನು ನೀಡುತ್ತಿದೆ.

ಏರ್ಟೆಲ್ (airtel) ಹಾಗೂ ಜಿಯೋ (jio) ಗಳ ಪ್ಲಾನ್ BSNL ಗಿಂತ ಹೆಚ್ಚಾಗಿವೆ. ಏರ್ಟೆಲ್ (airtel) ಅವರ ಪ್ಲಾನ್ ರೂ 155 ಹಾಗೂ ಜಿಯೋದ (jio) ಪ್ಲಾನ್ ಬೆಲೆ 119 ಇದೆ. BSNL ಕಂಪನಿ (BSNL Recharge) ಕೇವಲ ರೂ 87 ಕ್ಕೆ ಪ್ಲಾನ್ ಗಳನ್ನು ಒದಗಿಸುತ್ತದೆ.

ಈ ಯೋಜನೆಯಲ್ಲಿ ಒಟ್ಟು 14 ದಿನಗಳ ಕಾಲ ವ್ಯಾಲಿಡಿಟಿ (validity) ಇರುತ್ತದೆ ಹಾಗೂ ದಿನಕ್ಕೆ 1 GB ಡೇಟಾ (data) ಅನ್ನು ಪಡೆಯಬಹುದು. ಮತ್ತು ಇದರಲ್ಲಿ ಅನ್ ಲಿಮಿಟೆಡ್ (unlimited) ಕರೆ ಕೂಡ ಲಭ್ಯವಿದೆ. ಇದಲ್ಲದೆ ಗೇಮಿಂಗ್ (gaming) ಪ್ರಯೋಜನಗಳು ಕೂಡ ಇವೆ. ಆದರೆ ಎಸ್ಎಂಎಸ್ (SMS) ಕಳುಹಿಸುವ ಪ್ರಯೋಜನಗಳು ಇಲ್ಲ.

BSNL ನ ರೂ 97 ಪ್ಲಾನ್
ಇದರಲ್ಲಿ 15 ದಿನಗಳ ಕಾಲ ದಿನಕ್ಕೆ ಹೆಚ್ಚಿನ ಡೇಟಾ (data) ಅನ್ನು ಪಡೆಯಬಹುದು. ಪ್ರತಿ ದಿನಕ್ಕೆ 2 GB ಡೇಟಾ ಗಳನ್ನು ಸ್ವೀಕರಿಸಬಹುದು. ಒಟ್ಟಾಗಿ 15 ದಿನಕ್ಕೆ 30 GB ಡೇಟಾ (data) ದೊರೆಯುತ್ತದೆ. ಆದರೆ ಇದರಲ್ಲಿ ಎಸ್ಎಂಎಸ್ (SMS) ಕಳುಹಿಸುವ ಪ್ರಯೋಜನಗಳಿಲ್ಲ.

BSNL ನ ಮತ್ತೊಂದು ರೂ 99 ಪ್ಲಾನ್
ಈ ಯೋಜನೆ ಉತ್ತಮಾಗಿರುವುದು ಆಡಿಯೋ ಕರೆಗಾಗಿ. ಇದು ಒಟ್ಟಾರೆ 18 ದಿನಗಳ ವ್ಯಾಲಿಡಿಟಿ (validity) ಅನ್ನು ಒದಗಿಸುತ್ತದೆ. ಆದರೆ ಇದು ಯಾವುದೇ ರೀತಿಯ ಡೇಟಾ (data) ಹಾಗೂ ಮೆಸೇಜ್ (Message) ಮಾಡುವ ಸೌಲಭ್ಯವನ್ನು ಕಲ್ಪಿಸವುದಿಲ್ಲ.

You may also like

Leave a Comment