Home » ನಡು ರಸ್ತೆಯಲ್ಲೇ ವಿದ್ಯಾರ್ಥಿಯೋರ್ವಳ ಬರ್ಬರ ಹತ್ಯೆ , ಆರೋಪಿಯ ಬಂಧನ

ನಡು ರಸ್ತೆಯಲ್ಲೇ ವಿದ್ಯಾರ್ಥಿಯೋರ್ವಳ ಬರ್ಬರ ಹತ್ಯೆ , ಆರೋಪಿಯ ಬಂಧನ

0 comments

ಗುಂಟೂರು(ಆಂಧ್ರಪ್ರದೇಶ): ಯುವಕನೋರ್ವ ವಿದ್ಯಾರ್ಥಿನಿಯೊಬ್ಬರನ್ನು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹೊಡೆದು ವಿಕಾರವಾಗಿ ಕೊಲೆ ಮಾಡಿರುವ ಘಟನೆ ಗುಂಟೂರಿನಲ್ಲಿ ನಡೆದಿದೆ.

4ನೇ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ರಮ್ಯಾ ಎಂಬುವವರು ಕೊಲೆಗೀಡಾದವರಾಗಿದ್ದಾರೆ.

ರಮ್ಯಾ,ಉಪಾಹಾರ ಸೇವನೆಗೆಂದು ಹೊರಟಿದ್ದಾಗ ಬೈಕ್ ನಲ್ಲಿ ಬಂದ ಯುವಕನೋರ್ವ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದು,ಈ ಭಯಾನಕ ದೃಶ್ಯ ಘಟನಾ ಸ್ಥಳದ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಕಂಡು ಬಂದಿದೆ.

ಗುಂಟೂರು ನಗರ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿದ ಬಳಿಕ ಆರೋಪಿ ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆಗೆ ತನ್ನ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನಂತರ ಗಾಯಗೊಂಡ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನರೆಡ್ಡಿ ಆದೇಶಿಸಿದ್ದು, ವಿದ್ಯಾರ್ಥಿನಿ ರಮ್ಯಾಳ ಕುಟುಂಬಕ್ಕೆ 10 ಲಕ್ಷ ರೂ. ಸಹಾಯಧನವಾಗಿ ಘೋಷಿಸಿದ್ದಾರೆ.

You may also like

Leave a Comment