Home » ಭೀಕರ ಅಪಘಾತ | ಮದುವೆ ಮುಗಿಸಿ ವಾಪಾಸು ಬರುವಾಗ ಬಸ್ ಕಮರಿಗೆ ಬಿದ್ದು 25 ಜನ ದಾರುಣ ಸಾವು

ಭೀಕರ ಅಪಘಾತ | ಮದುವೆ ಮುಗಿಸಿ ವಾಪಾಸು ಬರುವಾಗ ಬಸ್ ಕಮರಿಗೆ ಬಿದ್ದು 25 ಜನ ದಾರುಣ ಸಾವು

by Mallika
3 comments

ಮದುವೆಗೆಂದು ಹೊರಟ್ಟಿದ್ದ ಬಸ್ಸೊಂದು ಪಲ್ಟಿಯಾಗಿ ಕಮರಿಗೆ ಬಿದ್ದು ಅದರಲ್ಲಿದ್ದ 25 ಮಂದಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ‌. ಈ ಘಟನೆ ಉತ್ತರಾಖಂಡ್ ರಾಜ್ಯದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

ಈ ಬಸ್ ಹರಿದ್ವಾರ ಜಿಲ್ಲೆಯ ಲಾಲ್‌ಧಾಂಗ್ ನಿಂದ ಬಿರ್ಖಾಲ್ ಬ್ಲಾಕ್ ನ ಕಂದ ತಲ್ಲಾ ಗ್ರಾಮದ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ.

ಪೌರಿ ಗಡ್ವಾಲ್ ಜಿಲ್ಲೆಯ ಲ್ಯಾನ್ಸ್ ಡೌನ್ ಬಳಿಯ ಸಿಮ್ಮಿ
ಗ್ರಾಮದ ಬಳಿ ಬಸ್‌ ಕಮರಿಗೆ ಬಿದ್ದಿದೆ. ಈ ಅಪಘಾತದಲ್ಲಿ
25 ಜನ ಸಾವನ್ನಪ್ಪಿದ್ದಾರೆ. ಎಲ್ಲರೂ ಮದುವೆ ಮುಗಿಸಿ ನಂತರ ಒಟ್ಟು 45 ಜನ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರಾತ್ರಿ 7.30 ರ ಸುಮಾರಿಗೆ ಬಸ್ ಕಮರಿಗೆ ಬಿದ್ದಿದೆ. ಸುಮಾರು 350 ಮೀಟರ್ ಆಳದ ಕಮರಿಗೆ ಬಸ್ ಬಿದ್ದಿದೆ ಎಂದು ಬ್ಲಾಕ್ ಹೆಡ್ ರಾಜೇಶ್ ಕಂದಾರಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಕೈಗೊಂಡ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಸಿಬ್ಬಂದಿ, ಬಿರೋಖಾಲ್ ಆರೋಗ್ಯ ಕೇಂದ್ರದ ವೈದ್ಯರ ತಂಡ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಿದೆ. ಘಟನೆಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

You may also like

Leave a Comment